LATEST NEWS
ಮಳೆ ಅಬ್ಬರ ಭಾರಿ ಪ್ರಮಾಣದಲ್ಲಿ ಕಡಲಕೊರೆತ ಆತಂಕದಲ್ಲಿ ಕಡಲ ತೀರದ ನಿವಾಸಿಗಳು

ಮಳೆ ಅಬ್ಬರ ಭಾರಿ ಪ್ರಮಾಣದಲ್ಲಿ ಕಡಲಕೊರೆತ ಆತಂಕದಲ್ಲಿ ಕಡಲ ತೀರದ ನಿವಾಸಿಗಳು
ಮಂಗಳೂರು ಜುಲೈ 16: ಕರಾವಳಿಯಲ್ಲಿ ಸುರಿಯುತ್ತಿರುವ ಮಳೆ ಕಡಲ ಕಿನಾರೆಯಲ್ಲಿ ಭಾರಿ ಕಡಲ ಕೊರೆತಕ್ಕೆ ಕಾರಣವಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಡಲ ಅಬ್ಬರ ಹೆಚ್ಚಾಗಿದ್ದು, ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಕಡಲಕೊರೆತ ಉಂಟಾಗುತ್ತಿದೆ.
ಈ ನಡುವೆ ಅರಬ್ಬೀ ಸಮುದ್ರದಲ್ಲಿ ಭಾರಿ ಗಾತ್ರದ ಅಲೆಗಳು ಏಳುವ ಸಂಭವ ವಿದೆ ಎಂದು ಹವಮಾನಾ ಇಲಾಖೆ ಮುನ್ಸೂಚನೆ ನೀಡಿದ್ದು, ಮೀನುಗಾರರಿಗೆ ಕಡಲಿಗೆ ಇಳಿಯದಂತೆ ಎಚ್ಚರಿಕೆ ನೀಡಿದೆ.

ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಅರಬ್ಬೀ ಸಮುದ್ರ ಅಬ್ಬರಿಸುತ್ತಿದ್ದು, ಕಡಲ ತೀರದಲ್ಲಿ ಕಡಲ್ಕೊರೆತ ತೀವ್ರ ವಾಗಿದೆ.
ಮಂಗಳೂರಿನ ಉಳ್ಳಾಲ,ಸೋಮೇಶ್ವರ ಪ್ರದೇಶಗಳಲ್ಲಿ ಭಾರೀ ಕಡಲ್ಕೊರೆತಕ್ಕೆ ಕಡಲ ತಡಿಯ ಮರಗಳು ಸಮುದ್ರ ಪಾಲಾಗಿವೆ.
ಮಂಗಳೂರು ಹೊರವಲಯದ ಸಸಿಹಿತ್ಲು ಕಡಲ ಕಿನಾರೆಯಲ್ಲಿ ಕಡಲ ಕೊರೆತ ಜೋರಾಗಿದೆ. ಅಂತರಾಷ್ಟ್ರೀಯ ಸರ್ಫಿಂಗ್ ಸ್ಪರ್ದೆ ನಡೆದ ಈ ಅತ್ಯಾಕರ್ಷಕ ಬೀಚ್ ಕಡಲ ಭಾರೀ ಅಲೆಗಳ ಹೊಡೆತಕ್ಕೆ ಒಳಗಾಗಿದೆ. ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದ ಈ ಕಡಲ ಕಿನಾರೆಯ ನೂರಾರು ಮರಗಳು ಕಡಲ ಕೊರೆತಕ್ಕೆ ಸಿಲುಕಿ ಸಮದ್ರದ ಒಡಲು ಸೇರಿವೆ.
ಮಂಗಳೂರು ಹೊರವಲಯದ ಸೋಮೇಶ್ವರದಲ್ಲಿಯೂ ಕಡಲಕೊರೆತ ತೀವ್ರಗೊಂಡಿದೆ. ಎರಡು ದಿನಗಳ ಹಿಂದೆ ಸೋಮೇಶ್ವರ ಕಡಲ ಕಿನಾರೆಯನ್ನು ಜಿಲ್ಲಾಡಳಿತ ಡೇಂಜರ್ ಝೋನ್ ಎಂದು ಘೋಷಿಸಿದೆ. ಉಳ್ಳಾಲದ ಕೈಕೊ,ಸುಭಾಷ್ ನಗರ ಸೇರಿದಂತೆ ಉಚ್ಚಿಲ ಪ್ರದೇಶದಲ್ಲಿ ಆಳೆತ್ತರದ ಕಲೆಗಳು ಏಳುತ್ತಿದ್ದು ಕಡಲ ರೌದ್ರ ನರ್ತನ ಆರಂಭಿಸಿದೆ.
ಸಮುದ್ರ ತೀರದ ಹಲವಾರು ಮರಗಳು ಸಮುದ್ರ ಪಾಲಾಗಿವೆ. ಕಲಡ ತೀರದಲ್ಲಿ ವಾಸಿಸುವ ನೂರಾರು ಕುಟುಂಬಗಳು ಆತಂಕದಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ
ನಿನ್ನೆ ತಡರಾತ್ರಿ ಸುರಿದ ಭಾರೀಗಾಳಿ ಮಳೆಗೆ ಮೂಡಬಿದ್ರೆ ಯ ಸ್ವರಾಜ್ ಮೈದಾನದಲ್ಲಿರುವ ತಾತ್ಕಾಲಿಕ ಮಾರುಕಟ್ಟೆಯ ಅಂಗಡಿಗಳಿಗೆ ಹಾನಿಯಾಗಿದೆ. ಅಂಗಡಿಗಳ ಮೇಲೆ ಹೊದಿಸಲಾಗಿದ್ದ ತಗಡಿನ ಶೀಟ್ ಗಳು ಭಾರೀ ಗಾಳಿಗೆ ಹಾರಿ ಹೋಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಇನ್ನು ಮಂಗಳೂರು ನಗರದಲ್ಲೂ ಜಡಿಮಳೆ ಯಾಗುತ್ತಿದ್ದು ಜನರ ದಿನನಿತ್ಯದ ಕಾಯಕಕ್ಕೆ ತಡೆಯುಂಟು ಮಾಡಿದೆ.
.