DAKSHINA KANNADA
ಮದ್ಯದಂಗಡಿಗೆ ಅನುಮತಿ ನೀಡುವ ರಾಜ್ಯ ಸರಕಾರಕ್ಕೆ ಗಾಂಧಿ ಜಯಂತಿ ಆಚರಿಸುವ ನೈತಿಕತೆ ಇಲ್ಲ – ಎಸ್ ಡಿಪಿಐ

ಪುತ್ತೂರು ಅಕ್ಟೋಬರ್ 2: ರಾಜ್ಯದಲ್ಲಿ ನೂತನವಾಗಿ 1000ಕ್ಕೂ ಅಧಿಕ ಮದ್ಯದಂಗಡಿ ತೆರೆಯಲು ರಾಜ್ಯ ಸರಕಾರ ನಿರ್ಧಾರ ಮಾಡಿರುವುದನ್ನು ವಿರೋಧಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪ್ರತಿಭಟನೆ ನಡೆಸಿದೆ.
ಪುತ್ತೂರಿನ ಅಮರ್ ಜವಾನ್ ಜ್ಯೋತಿ ಬಳಿ ಪ್ರತಿಭಟನೆ ನಡೆಸಿದ ಎಸ್ ಡಿಪಿಐ ಕಾರ್ಯಕರ್ತರು, ರಾಜ್ಯ ಸರಕಾರ ಒಂದು ಕಡೆ ಗಾಂಧಿ ಜಯಂತಿ ಆಚರಣೆ ಮಾಡುತ್ತಿದ್ದರೆ, ಇನ್ನೊಂದು ಕಡೆ ರಾಜ್ಯದಲ್ಲಿ 3000 ಕ್ಕೂ ಅಧಿಕ ಮದ್ಯದಂಗಡಿಗೆ ಅನುಮತಿ ನೀಡುತ್ತಿದೆ ಎಂದು ಆರೋಪಿಸಿದರು. ಮದ್ಯದಂಗಡಿಗೆ ಅನುಮತಿ ನೀಡುವ ರಾಜ್ಯ ಸರಕಾರಕ್ಕೆ ಗಾಂಧಿ ಜಯಂತಿ ಆಚರಿಸುವ ನೈತಿಕತೆ ಇಲ್ಲ ಎಂದು ಎಸ್‌ಡಿಪಿಐ ಕಾರ್ಯಕರ್ತರಿಂದ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
