LATEST NEWS
ಇದೇ ರೀತಿ ಮುಸಲ್ಮಾನರ ಬಂಧನ ಮುಂದುವರೆದರೆ.. ಕಮಿಷನರ್ ಕಚೇರಿ ಗೇಟ್ ಒಳಗೂ ಹೋಗದಂತೆ ನಾವು ಮಂಗಳೂರನ್ನ ಸ್ತಬ್ದಗೊಳಿಸುತ್ತೇವೆ – ಎಸ್ ಡಿಪಿಐ ಎಚ್ಚರಿಕೆ
ಮಂಗಳೂರು ಜೂನ್ 25: ಬೊಳಿಯಾರ್ ಘಟನೆ ಬಳಿಕ ಪೊಲೀಸರು ಅಮಾಯಕ ಮುಸ್ಲಿಂರನ್ನು ಅರೆಸ್ಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಎಸ್ ಡಿಪಿಐ ಕಾರ್ಯಕರ್ತರು ಕೊಣಾಜೆ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್ ಡಿ ಪಿ ಐ ಮುಖಂಡ ರಿಯಾಜ್ ಕಡಂಬು ಬೊಳಿಯಾರ್ ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಕಮಿಷನರ್ ಬಿಜೆಪಿ ಹಾಗು ಸಂಘ ಪರಿವಾರ ಕಾರಣ ಎಂದು ಮಾಧ್ಯಮದ ಮುಂದೆ ಉತ್ತರ ನೀಡಿದವರು ಅದೆ ರಾತ್ರಿ ಮುಸಲ್ಮಾನರ ಮನೆಗೆ ದಾಳಿ ಮಾಡಿದ್ದಾರೆ ಎಂದು ಆರೋಪಿಸಿದ ಅವರು, ಬೋಳಿಯಾರ್ ಘಟನೆ ಪೊಲೀಸ್ ಇಲಾಖೆ ಎಡವಟ್ಟಿನ ಕಾರಣಕ್ಕೆ ಆಗಿದೆ. ಪೊಲೀಸರ ಕಾಲರ್ ಪಟ್ಟಿ ಹಿಡಿಯುತ್ತೇನೆ ಎಂದ ಶಾಸಕ ಹರೀಶ್ ಪೂಂಜನನ್ನ ಬಂಧಿಸಲು ಧಮ್ಮಿಲ್ಲ , ಸ್ಪೀಕರ್ ವಿರುದ್ಧ ಹೇಳಿಕೆ ನೀಡಿದ ಸಂಘ ಪರಿವಾರದ ನಾಯಕನನ್ನ ಬಂಧಿಸಲು ಆಗಲಿಲ್ಲ, ಹರೀಶ್ ಪೂಂಜ ನನ್ನ ವಶಕ್ಕೆ ಪಡೆಯಲು ಹೋದಾಗ ತಡೆಯಲು ಬಂದ ಕಾರ್ಯಕರ್ತರ ಮೇಲೆ ಕೇಸು ದಾಖಲಾಗಿತ್ತು. 80ಕ್ಕೂ ಹೆಚ್ಚು ಕಾರ್ಯಕರ್ತರ ಮೇಲೆ ಕೇಸು ದಾಖಲಾಗಿದೆ. ಇದೆ ಪೊಲೀಸ್ ಇಲಾಖೆ ಇವರಿಗೆ ಭಯದಲ್ಲಿ ನೋಟಿಸ್ ನೀಡಿದ್ದಾರೆ. ಅವರು ನಿಗದಿ ಪಡಿಸಿದ ಜಾಗಕ್ಕೆ ಹೋಗಿ ನೋಟಿಸ್ ಕೊಟ್ಟಿದ್ದಾರೆ. ಪೊಲೀಸರು ಭಯದಿಂದಲೇ ನೋಟಿಸ್ ನೀಡುವಂತೆ ಮಾಡಿದವರು ಯಾರು? ಹರೀಶ್ ಪೂಂಜನನ್ನ ಬಂಧಿಸಲು ಹೋದಾಗ ಗೃಹ ಸಚಿವ ಪರಮೇಶ್ವರ್ ಗೆ ಅತೀ ಹೆಚ್ಚು ಕಾಲ್ ಮಾಡಿದ ಕಾಂಗ್ರೆಸ್ ನಾಯಕ ಯಾರು?ಪುತ್ತೂರು ಶಾಸಕ ಅಶೋಕ್ ರೈ ಅಥವಾ ಸ್ಪೀಕರ್ ಯು ಟಿ ಖಾದರ್? ಎಂದು ಪ್ರಶ್ನಿಸಿದರು.
ಸ್ಪೀಕರ್ ಖಾದರ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಎಸ್ಡಿಪಿಐ ಮುಖಂಡ ರಿಯಾಜ್ ಕಡಂಬು ಯು ಟಿ ಖಾದರ್ ರವರ ತಂದೆಗೆ ಗೌರವ ನೀಡಿ ಇಲ್ಲಿ ಬಿಜೆಪಿ ಬರಬಾರದೆಂದು ಜನರು ಗೆಲ್ಲಿಸಿದ್ದಾರೆ. ಯು ಟಿ ಖಾದರ್ ನಿಮಗೆ ಮುಸಲ್ಮಾನರು ವೋಟ್ ಹಾಕಿದ್ರು ಎಂದರು.
ಹರೀಶ್ ಪೂಂಜ ಹೇಳಿಕೆ ನೀಡಿದ್ದಾನೆ ಮುಸಲ್ಮಾನರ ಮಸೀದಿಗಳಲ್ಲಿ ಆಯುಧ ಇದೆ ಎಂದು ಉದ್ರೇಕಿಸುವ ಹೇಳಿಕೆ ನೀಡಿದ ಹರೀಶ್ ಪೂಂಜನ ಮೇಲೆ ಕೇಸು ದಾಖಲಿಸುವ ತಾಕತ್ ಕಮಿಷನರಿಗೆ ಇದಿಯಾ? ಮಸೀದಿಗಳಲ್ಲಿ ಆಯುಧ ಇದ್ದಿದ್ರೆ ಬಾಬರಿ ಮಸೀದಿ ಉರುಳುತ್ತಿರಲಿಲ್ಲ. ಮಳಲಿ ಮಸೀದಿ ಬಳಿ ಶರಣ್ ಪಂಪವೆಲ್ ಬರುತ್ತಿರಲಿಲ್ಲ, ಇದೆ ರೀತಿ ಮುಸಲ್ಮಾನರ ಬಂಧನ ಮುಂದುವರೆದರೆ, ಕಮಿಷನರ್ ಕಚೇರಿ ಗೇಟ್ ಒಳಗೂ ಹೋಗದಂತೆ ನಾವು ಮಂಗಳೂರನ್ನ ಸ್ತಬ್ದಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.