Connect with us

LATEST NEWS

ಉಳ್ಳಾಲ ಮಹಿಳೆಗೆ ಅತ್ಯಾಚಾರ ಕಿರುಕುಳ ಆರೋಪ – ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಲಿ :ಎಸ್‌ಡಿಪಿಐ

ಮಂಗಳೂರು: ಉಳ್ಳಾಲ ಮಹಿಳೆಗೆ ಅತ್ಯಾಚಾರ – ಕಿರುಕುಳ ಆರೋಪ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಲಿ ಎಂದು ಎಸ್‌ಡಿಪಿಐ ಹೇಳಿದೆ.


ಉಳ್ಳಾಲದಲ್ಲಿ ಮಹಿಳೆಗೆ ಎಸ್‌ಡಿಪಿಐ ಅಧ್ಯಕ್ಷ ಸಿದ್ದೀಕ್ ಎಂಬಾತ ಕಿರುಕುಳ ನೀಡಿದ್ದಾನೆಂದು ಮಾದ್ಯಮಗಳಲ್ಲಿ ವರದಿಯಾಗುತ್ತಿದ್ದು ಸಿದ್ದೀಕ್ ಎಂಬಾತ ಎಸ್‌ಡಿಪಿಐಯ ಅಧ್ಯಕ್ಷನಲ್ಲ ಆತ ಸಾಮಾನ್ಯ ಕಾರ್ಯಕರ್ತನಾಗಿದ್ದು, ಎ.ಆರ್.ಅಬ್ಬಾಸ್ ಎಂಬವರು ಉಳ್ಳಾಲ ನಗರ ಸಮಿತಿಯ ಅಧ್ಯಕ್ಷರಾಗಿದ್ದಾರೆ ಎಂದು ಅದು ಹೇಳಿದೆ.

ಇದರ ಬಗ್ಗೆ ಪಕ್ಷದ ಆಂತರಿಕ ತನಿಖೆ ನಡೆಸಲು ಸಮಿತಿಯನ್ನು ರಚಿಸಲಾಗಿದ್ದು, ವಾಸ್ತವಾಂಶ ತಿಳಿಯಲು ಆತ ಇದುವರೆಗೂ ನಮ್ಮ ಸಂಪರ್ಕಕ್ಕೆ ಲಭ್ಯವಾಗಿಲ್ಲ, ಒಂದು ವೇಳೆ ಆತ ತಪ್ಪಿತಸ್ಥನಾಗಿದ್ದರೆ ಆತ ನಮ್ಮ ಕಾರ್ಯಕರ್ತ ಎಂದುಕೊಂಡು ಯಾವುದೇ ಕಾರಣಕ್ಕೂ ಆತನನ್ನು ನಮ್ಮ ಪಕ್ಷ ಬೆಂಬಲಿಸುವುದಿಲ್ಲ, ಹಾಗೂ ಯಾವುದೇ ರೀತಿಯ ಸಹಾಯವನ್ನು ಮಾಡುವುದಿಲ್ಲ ಹಾಗೂ ಪೋಲಿಸ್ ಇಲಾಖೆ ಆತನ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇವೆ.

ಅದೇ ರೀತಿ ಪೋಲಿಸ್ ಇಲಾಖೆ ಕೂಡ ಎರಡೂ ಕಡೆಯಿಂದಲೂ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಹಿಳೆಯರನ್ನು ಉಪಯೋಗಿಸಿಕೊಂಡು ಹನಿಟ್ರಾಪ್ ಮತ್ತು ಯುವಕರ ಫೋಟೋ ತೆಗೆದು ಬ್ಲಾಕ್ ಮೇಲ್ ನಡೆಸಲಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆ ದೃಷ್ಟಿಕೋನವನ್ನು ಇಟ್ಟುಕೊಂಡು ಕೂಡ ಪೋಲಿಸ್ ಇಲಾಖೆ ತನಿಖೆ ನಡೆಸಬೇಕು.

ಅಂತಹ ಷಡ್ಯಂತರಕ್ಕೆ ಈತ ಬಲಿಯಾಗಿದ್ದಾನೆಯೇ ಎಂದು ತನಿಖೆಯಿಂದ ಗೊತ್ತಾಗಬೇಕಿದೆ ಎಂದು ಎಸ್‌ಡಿಪಿಐ ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಬ್ಬಾಸ್ ಕಿನ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *