Connect with us

    LATEST NEWS

    ಬ್ಲಡ್ ಬ್ಯಾಂಕ್ ಗಳಲ್ಲಿ ಎಸ್ ಡಿಪಿಐ ಕಾರ್ಯಕರ್ತರ ರಕ್ತ ಇದೆ ಅದನ್ನು ವಶಕ್ಕೆ ಪಡೆಯಿರಿ

    ಮಂಗಳೂರು ನವೆಂಬರ್ 08: ಎಲ್ಲಾ ಬ್ಲಡ್ ಬ್ಯಾಂಕ್ ಗಳಲ್ಲಿ ಎಸ್ ಡಿಪಿಐ ಕಾರ್ಯಕರ್ತರ ರಕ್ತ ಇದೆ ಅದನ್ನು ಬೇಕಾದರೆ ಪೊಲೀಸ್ ಕಮಿಷನರ್ ವಶಕ್ಕೆ ಪಡೆಯಲಿ ಎಂದು ನಡೆಸಲಿದೆ ಎಂದು ಎಸ್.ಡಿ.ಪಿ.ಐ ದ.ಕ.ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


    ಮಂಗಳೂರಿನಲ್ಲಿ ಮಾತನಾಡಿದ ಅವರು ಎಸ್‌ಡಿಪಿಐ ಮುಖಂಡ ಶಾಫಿ ಬೆಳ್ಳಾರೆ, ಇಕ್ಬಾಲ್ ಬೆಳ್ಳಾರೆ ಎಲ್ಲೂ ತಲೆಮರೆಸಿಕೊಂಡಿರಲಿಲ್ಲ. ಸಾರ್ವಜನಿಕವಾಗಿ ಕಾರ್ಯಕ್ರಮದಲ್ಲಿ ‌ಭಾಗವಹಿಸ್ತಾ ಇದ್ರು. ಯಾಕಾಗಿ ಇವ್ರನ್ನು ಈ ರೀತಿ ಬಂಧಿಸಬೇಕಿತ್ತು. ಮುಖಂಡರನ್ನು ವಿಚಾರಣೆಗೆ ಕರೆದ್ರೆ ಅವ್ರೇ ಬರ್ತಾರೆ. ಅದು ಬಿಟ್ಟು ಸಾರ್ವಜನಿಕ ವಾಹನದಲ್ಲಿ ಬರುವ ವೇಳೆ ಯಾಕೆ ಬಂಧಿಸಬೇಕಿತ್ತು. ರಾಜ್ಯದಾದ್ಯಂತ ಎಸ್ಡಿಪಿಐ ಪ್ರತಿಭಟನೆಗೆ ಅನುಮತಿ ಕೇಳಿತ್ತು. ಇಲಾಖೆ ಎಲ್ಲಾ ಕಡೆ ಅನುಮತಿ ನೀಡಿದೆ. ಆದ್ರೆ ಇವತ್ತು ಮಂಗಳೂರು ಪೊಲೀಸರು ಅನುಮತಿ ರದ್ದುಗೊಳಿಸಿದ್ದಾರೆ. ನಮ್ಮ ಪ್ರತಿಭಟನೆ ಜನ್ರ ಹಕ್ಕು ಅದನ್ನು ಪೊಲೀಸ್ ಇಲಾಖೆ ಹತ್ತಿಕ್ಕಿದೆ ಎಂದು ದೂರಿದರು. ನಮ್ಮ 16 ಸೇವಾ ಕೇಂದ್ರಗಳಿಗೆ ಬೀಗ ಹಾಕಿದ್ದಾರೆ. ಅಲ್ಲಿ ಸರ್ಕಾರಿ ಯೋಜನೆಗಳಿಗಾಗಿ ಸಾರ್ವಜನಿಕರು ಬರ್ತಾ ಇದ್ರು. ಈ ಸೇವಾ ಕಚೇರಿಗಳಿಗೆ ಬೀಗ ಹಾಕಿ ಏನು ಸಾಧನೆ ಮಾಡಲು ಹೊರಟ್ಟಿದ್ದಾರೆ ಎಂದರು.

    ಎಸ್‌ಡಿಪಿಐ ನಾಯಕರನ್ನು ಬಂಧಿಸಿ ಪಕ್ಷವನ್ನು ದಮನಿಸುವ ಕೆಲಸ ನಡೆಯುತ್ತಿದೆ. 16 ಸೇವಾ ಕೇಂದ್ರಗಳಿಗೆ ಎನ್‌ಐಎ ಬೀಗ ಜಡಿದಿರುವುದು ಯಾಕೆ..? ಇಂದು ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ನಡೆಯುತ್ತದೆ. ಮುಂದಿನ ದಿನಗಳಲ್ಲಿ ಎಸ್‌ಡಿಪಿಐ ಎಲ್ಲೆಡೆ ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಎಸ್.ಡಿ.ಪಿ.ಐ ದ.ಕ.ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *