Connect with us

LATEST NEWS

ಪಕ್ಷದ ಸಮಾವೇಶಕ್ಕಾಗಿ ಫ್ಲೆಕ್ಸ್ ಅಳವಡಿಸುತ್ತಿದ್ದಾಗ ವಿದ್ಯುತ್ ತಗುಲಿ ಎಸ್‌ಡಿಪಿಐ ಮುಖಂಡ ಸಾವು

ಪಕ್ಷದ ಸಮಾವೇಶಕ್ಕಾಗಿ ಫ್ಲೆಕ್ಸ್ ಅಳವಡಿಸುತ್ತಿದ್ದಾಗ ವಿದ್ಯುತ್ ತಗುಲಿ ಎಸ್‌ಡಿಪಿಐ ಮುಖಂಡ ಸಾವು

ಪುತ್ತೂರು ಅಕ್ಟೋಬರ್ 11: ಪಕ್ಷದ ಸಮಾವೇಶಕ್ಕಾಗಿ ಪ್ಲೆಕ್ಸ್ ಆಳವಡಿಸುತ್ತಿದ್ದಾಗ ವಿದ್ಯುತ್ ತಗುಲಿ ಎಸ್‌ಡಿಪಿಐ ಮುಖಂಡರೊಬ್ಬರು ಮೃತಪಟ್ಟ ಘಟನೆ ಪುತ್ತೂರು ನಗರದಲ್ಲಿ ನಡೆದಿದೆ.

ಎಸ್‌ಡಿಪಿಐ ಪುತ್ತೂರು ನಗರ ಘಟಕದ ಅಧ್ಯಕ್ಷ ಹಂಝ ಅಫ್ನಾನ್ ಮೃತ ದುರ್ದೈವಿ. ಪಕ್ಷದ ಸಮಾವೇಶಕ್ಕಾಗಿ ಸ್ವಾಗತ ಕೋರಲು ರಾತ್ರಿ ಹೊತ್ತು ಫ್ಲೆಕ್ಸ್ ಅಳವಡಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಶುಕ್ರವಾರ ಪಕ್ಷದ ಜಾಥಾ ಮತ್ತು ಸಮಾವೇಶ ನಡೆಯಲಿದ್ದ ಹಿನ್ನೆಲೆಯಲ್ಲಿ ಕಾರ್ಯಕರ್ತರು ರಾತ್ರಿ ಹೊತ್ತು ಫ್ಲೆಕ್ಸ್ ಅಳವಡಿಸುತ್ತಿದ್ದರು. ನಗರದ ದರ್ಬೆ ಜಂಕ್ಷನ್ ಬಳಿ ಫ್ಲೆಕ್ಸ್ ಕಟ್ಟುತ್ತಿದ್ದಾಗ ಫ್ಲೆಕ್ಸ್ ವಿದ್ಯುತ್ ತಂತಿಗೆ ತಗುಲಿ ಶಾಕ್ ಹೊಡೆದ ಕಾರಣ ಈ ಅವಘಡ ಸಂಭವಿಸಿದೆ. ಘಟನೆ ಸಂಬಂಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *