DAKSHINA KANNADA
SDPI ಲೆಕ್ಕಕ್ಕೆ ಇಲ್ಲದ ಪಕ್ಷ ಅವರ ಬೆಂಬಲ ನಮಗೆ ಬೆಕಿಲ್ಲ – ಕಾಂಗ್ರೇಸ್ ಮುಖಂಡ ಹೆಚ್. ಮಹಮ್ಮದ್ ಆಲಿ
ಪುತ್ತೂರು ಎಪ್ರಿಲ್ 23: ಎಸ್.ಡಿ.ಪಿ.ಐ ಪಕ್ಷ ಲೆಕ್ಕಕ್ಕಿಲ್ಲದ ಪಕ್ಷವಾಗಿದ್ದು, ಅವರ ಬೆಂಬಲ ಕಾಂಗ್ರೇಸ್ ಗೆ ಅಗತ್ಯವಿಲ್ಲ ಎಂದು ಕಾಂಗ್ರೇಸ್ ಮುಖಂಡ ಹೆಚ್. ಮಹಮ್ಮದ್ ಆಲಿ ಹೇಳಿಕೆ ನೀಡಿದ್ದಾರೆ.
ಪುತ್ತೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೇಸ್ ಮುಖಂಡ ಕೇರಳದಲ್ಲಿ ಕಾಂಗ್ರೇಸ್ ಎಸ್.ಡಿ.ಪಿ.ಐ ಬೆಂಬಲವನ್ನು ತಿರಸ್ಕರಿಸಿದೆ. ಕರ್ನಾಟಕದಲ್ಲೂ ಎಸ್.ಡಿ.ಪಿ.ಐ ಜೊತೆ ಯಾವುದೇ ಮಾತುಕತೆಗಳು ನಡೆದಿಲ್ಲ. ಎಸ್.ಡಿ.ಪಿ.ಐ ಪಕ್ಷದ ಬೆಂಬಲ ಕಾಂಗ್ರೇಸ್ ಪಕ್ಷಕ್ಕೆ ಬೇಕಾಗಿಲ್ಲ. ಅಲ್ಲದೆ ಎಸ್.ಡಿ.ಪಿ.ಐ ಪಕ್ಷ ಕಾಂಗ್ರೇಸ್ ಪಕ್ಷಕ್ಕೆ ಬೆಂಬಲ ಕೊಡುತ್ತೇನೆ ಎಂದು ಹೇಳಿಲ್ಲ, ಕಾಂಗ್ರೇಸ್ ಪಕ್ಷವೂ ಆ ಪಕ್ಷದ ಬೆಂಬಲ ಕೇಳಿಲ್ಲ ಎಂದರು.