LATEST NEWS
ಬೆಂಗಳೂರು ಗಲಭೆಗೆ ಸ್ಥಳೀಯ ಪೊಲೀಸರ ನಿರ್ಲಕ್ಷ್ಯ ಕಾರಣ – ಎಸ್ ಡಿಪಿಐ

ಮಂಗಳೂರು ಅಗಸ್ಟ್ 12: ಬೆಂಗಳೂರಿನ ಡಿಜೆ ಹಳ್ಳಿಯಲ್ಲಿ ಗಲಭೆಗೆ ಸ್ಥಳೀಯ ಪೊಲೀಸರ ನಿರ್ಲಕ್ಷವೇ ಕಾರಣ ಎಂದು ಎಸ್ ಡಿಪಿಐ ಆರೋಪ ಮಾಡಿದೆ. ಈ ಕುರಿತಂತೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ SDPI ರಾಜ್ಯಾಧ್ಯಕ್ಷ ಇಲ್ಯಾಸ್ ಮೊಹಮ್ಮದ್ ತುಂಬೆ, ನವೀನ್ ಎಂಬಾತ ಪ್ರವಾದಿ ಹಾಗೂ ಇಸ್ಲಾಂ ಧರ್ಮದ ಬಗ್ಗೆ ಅವಹೇಳನ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ್ದರು.
ಈ ಬಗ್ಗೆ ಸ್ಥಳೀಯ ಯುವಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು, ಆದರೆ ನವೀನ್, ಶಾಸಕ ಅಖಂಡ ಶ್ರೀನಿವಾಸ್ ರ ಸೋದರ ಅಳಿಯನಾಗಿರೋದ್ರಿಂದ ಪೊಲೀಸರು ಆತನ ಮೇಲೆ ಯಾವುದೇ ಕ್ರಮಕೈಗೊಂಡಿಲ್ಲ. ಮೊದಲೇ ಆಕ್ರೋಶದಿಂದ ಇದ್ದ ಜನ ಪೊಲೀಸರ ನಿರ್ಲಕ್ಷ್ಯದಿಂದ ರೊಚ್ಚಿಗೆದ್ದಿದ್ದು, ಈ ಅಹಿತಕರ ಘಟನೆಗೆ ಕಾರಣ ಎಂದು ತಿಳಿಸಿದರು.

ಬೆಂಗಳೂರಿನ ಗಲಭೆ ಹಾಗೂ ಮೂರು ಜೀವ ಬಲಿಯಾಗಲು ಸ್ಥಳೀಯ ಪೊಲೀಸರ ನಿರ್ಲಕ್ಷ್ಯವೇ ಹಾಗೂ ನವೀನ್ ಎಂಬಾತನ ಕೋಮು ಪ್ರಚೋದನಾ ಪೋಸ್ಟ್ ಕಾರಣ ಎಂದು ಆರೋಪಿಸಿದರು. SDPI ಮುಖಂಡರು ಪೊಲೀಸರ ಜೊತೆ ಸೇರಿ ಜನರನ್ನು ಸಮಾಧಾನಪಡಿಸಿದ್ದಾರೆ. ಆದರೆ ಗಲಭೆ ನಿಯಂತ್ರಿಸಲು ಬಂದ ಮುಝಮಿಲ್ ಪಾಷರನ್ನು ಬಂಧಿಸಿದ್ದಾರೆ. ಇದು ಪೊಲೀಸರ ಹಾಗೂ ಸರ್ಕಾರದ ವೈಫಲ್ಯವನ್ನು ಮರೆಮಾಚಲು ಯತ್ನಿಸಿ ಮಾಮೂಲಿಯಂತೆ SDPIಯನ್ನು ಗಲಭೆಗೆ ಎಳೆದು ತರುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.