LATEST NEWS
ಪೊಲೀಸರಿಗೆ ನಿಂದಿಸಿದ ಪ್ರಕರಣದ ಪ್ರಮುಖ ಆರೋಪಿಗಳು ಅರೆಸ್ಟ್
ಮಂಗಳೂರು ಮೇ 31: ಕಳೆದ ವಾರ ಕಣ್ಣೂರಿನಲ್ಲಿ ನಡೆದ ಎಸ್ ಡಿಪಿಐ ಸಮಾವೇಶದಲ್ಲಿ ಭಾಗವಹಿಸಲು ತೆರಳಿದ್ದ ಯುವಕರ ತಂಡವೊಂದು ಪೊಲೀಸರಿಗೆ ನಿಂಧಿಸಿದರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳು ಸೇರಿದಂತೆ ಒಂಬತ್ತು ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತರನ್ನು ನೌಷಾದ್(28), ಹೈದರಾಲಿ(27), ಮೊಹಮ್ಮದ್ ಸಯ್ಯದ್ ಅಫ್ರೀದ್ (23), ಬಶೀರ್ (40), ಜುಬೇರ್ (32), ಜಲೀಲ್ (25), ೧) ಮೊಹಮ್ಮದ್ ಯಾಸೀನ್ (25), ಅಫ್ರೀದ್ ಸಾಗ್(19), ಮೊಹಮ್ಮದ್ ತುಫೇಲ್(19) ಎಂದು ಗುರುತಿಸಲಾಗಿದೆ.
ಮೇ 27 ರಂದು ಕಣ್ಣೂರಿನಲ್ಲಿ ನಡೆದ ಎಸ್ ಡಿಪಿಐ ಜನಾಧಿಕಾರ ಸಮಾವೇಶಕ್ಕೆ ತೆರಳುತ್ತಿದ್ದ ಗುಂಪೊಂದು ಪೊಲೀಸ ರನ್ನು ನಿಂದಿಸಿದಲ್ಲದೇ ಕಾರ್ಯಕ್ರಮದ ಬಂದೋಬಸ್ತ್‌ನಲ್ಲಿದ್ದ ಪೊಲೀಸ್ ಸಿಬಂದಿಗಳ ಮೇಲೆ ಗಾಡಿಯನ್ನು ಹತ್ತಿಸಲು ಪ್ರಯತ್ನಿಸಿದ್ದರು.
ಆರೋಪಿಗಳನ್ನು ಮತ್ತು ಅವರಿಗೆ ಆಶ್ರಯ ನೀಡಿದವರನ್ನು ಬೆಂಗಳೂರು ಮತು ಮೈಸೂರಿನಿಂದ ವಶಕ್ಕೆ ಪಡೆದು ವಿಚಾರಿಸಿದಾಗ ಪ್ರಮುಖ ಆರೋಪಿತಗಳ ನೌಷಾದ್ ಮತು ಹೈದರಾಲಿ ರವರು ತಾವು ಇತ್ತೀಚೆಗೆ ಕೇರಳದ ಅಲಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸರಿಗೆ ಬೈಯ್ಯುವ ವೀಡಿಯೋಗಳು ವಾಟ್ಸಪ್‌ನಲ್ಲಿ ವೈರಲ್ ಆಗಿದು , ಇದನ್ನು ನೋಡಿ ಪ್ರಭಾವಿತರಾಗಿ ಈ ರೀತಿ ಮಾಡಿರುವುದಾಗಿ ಹೇಳಿದ್ದು, ಅಲ್ಲದೇ ತಾವು ಕಾರ್ಯಕ್ರಮ ಮುಗಿದ ಕೂಡಲೇ ಮೈಸೂರು ಮತ್ತು ಬೆಂಗಳೂರಿಗೆ ಹೋಗಿ ಪೊಲೀಸರ ಕಣ್ತಪ್ಪಿಸಿ ಅಡಗಿ ಕುಳಿತು ಅಲ್ಲಿಂದ ಮುಂದೆ ಕೇರಳ, ಕಾಸರಗೋಡು ಪರಿಸರದಲ್ಲಿ ಆಶ್ರಯ ಪಡೆದು ಪೊಲೀಸರಿಗೆ ಸಿಗದಂತೆ ಯೋಜನೆ ರೂಪಿಸಿದ್ದಾಗಿ ತಿಳಿಸಿದ್ದಾರೆ.