LATEST NEWS
ಉಳ್ಳಾಲ ಕಡಲ ಕಿನಾರೆಯಲ್ಲಿ ಸ್ಕೂಬಾ ಡೈವಿಂಗ್ ಸಾಹಸ ಜಲಕ್ರೀಡೆ
ಉಳ್ಳಾಲ ಕಡಲ ಕಿನಾರೆಯಲ್ಲಿ ಸ್ಕೂಬಾ ಡೈವಿಂಗ್ ಸಾಹಸ ಜಲಕ್ರೀಡೆ
ಮಂಗಳೂರು,ಡಿಸೆಂಬರ್ 30 : ಸಮುದ್ರದ ಆಳಕ್ಕಿಳಿದು ಅಲ್ಲಿಯ ಪ್ರಾಕೃತಿ ವಿಸ್ಮಯಗಳನ್ನು ಕಣ್ತುಂಬಿಕೊಳ್ಳುವ ಕನಸು ಹೊತ್ತ ಸಾಹಸಿ ಗಳಿಗೆ ಒಂದು ಸಂತಸದ ಸುದ್ದಿ.
ಸ್ಕೂಬಾ ಡೈವಿಂಗ್ ನ ರೋಮಾಂಚಕ ಅನುಭವ ಪಡೆಯಲು ಉತ್ತರ ಕನ್ನಡ ಜಿಲ್ಲೆಯ ನೆತ್ರಾಣಿ ಅಥವಾ ಉಡುಪಿಯ ಕಾಪು ಗೆ ಹೋಗಬೇಕಾಗಿಲ್ಲ. ಸ್ಕೂಬಾ ಡೈವಿಂಗ್ ನ ಸಾಹಸಿ ಅನುಭವ ಮಂಗಳೂರಿನಲ್ಲಿ ದೊರೆಯಲಿದೆ.
ಸ್ಕೂಬಾ ಡೈವಿಂಗ್ ಸಾಹಸ ಜಲ ಕ್ರೀಡೆ ಮಂಗಳೂರಿನ ಉಳ್ಳಾಲ ಸಮುದ್ರ ತೀರದಲ್ಲಿ ಆರಂಭಗೊಳ್ಳಲಿದೆ.
ಈ ಮೂಲಕ ಇನ್ನು ಮುಂದೆ ಸಾಹಸಿಗರು ಉಳ್ಳಾಲದ ಅರಬ್ಬಿ ಸಮುದ್ರದಾಳದ ಬೆರಗುಗಳಿಗೆ ಸಾಕ್ಷಿಯಾಗಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪಣತೊಟ್ಟಿರುವ ಜಿಲ್ಲಾಡಳಿತ ಸ್ಕೂಬಾ ಡೈವಿಂಗ್ ಜಲ ಸಾಹಸ ಕ್ರೀಡೆ ಆರಂಭಿಸಲು ಯೋಜನೆ ರೂಪಿಸಿದೆ.
ಕಳೆದ ಆನೇಕ ತಿಂಗಳುಗಳಿಂದ ಮಂಗಳೂರಿನಲ್ಲಿ ಈ ಸ್ಕೂಬಾ ಡೈವಿಂಗ್ ಸಾಹಸ ಜಲಕ್ರೀಡೆಗೆ ಸೂಕ್ತ ಜಾಗಕ್ಕಾಗಿ ಹುಡುಕಾಡ ನಡೆಯುತ್ತಿತ್ತು.
ಅಂತಿಮವಾಗಿ ಉಳ್ಳಾಲದ ಸ್ಥಳ ಸ್ಕೂಬಾ ಡೈವಿಂಗ್ ಜಲ ಸಾಹಸ ಕ್ರೀಡೆ ಗೆ ಆಯ್ಕೆಯಾಗಿದೆ.
ಸ್ಕೂಬಾ ಡೈವಿಂಗ್ ನಡೆಯುವ ಉಳ್ಳಾಲ ಪ್ರದೇಶದಲ್ಲಿ ಹವಳದ ದಿಬ್ಬಗಳು, ಆಕರ್ಷಕ ಬಣ್ಣ ಬಣ್ಣದ ಮೀನುಗಳು ಹಾಗೂ ವೈವಿಧ್ಯಮಯವಾದ ಜಲ ಜೀವರಾಶಿ ಇದೆ ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಸ್ಕೂಬಾ ಡೈವಿಂಗ್ ನೆಡೆಸಲು ವೆಸ್ಟ್ ಕೋ ಅಡ್ವೆಂಚರ್ಸ್ ಕಂಪೆನಿ ಹಾಗು ಸರ್ಫೆಸ್ ಸಂಸ್ಥೆ ಮುಂದೆ ಬಂದಿವೆ .
ಇದೇ ಕಂಪನಿ ಗೋವಾ, ಮುಂಬೈ ಮತ್ತು ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ಸಾಹಸ ಜಲಕ್ರೀಡೆಗೆ ವೇದಿಕೆ ಕಲ್ಪಿಸಿದೆ.