LATEST NEWS
ಸ್ಕೂಟರ್ ಗೆ ಡಿಕ್ಕಿ ಹೊಡೆದ ಹಾಲಿನ ವಾಹನ – ಅದೃಷ್ಟವಶಾತ್ ಪಾರಾದ ಮಹಿಳೆ

ಉಡುಪಿ:ಸ್ಕೂಟರ್ ನಲ್ಲಿ ರಸ್ತೆ ದಾಟುತ್ತಿದ್ದ ಮಹಿಳೆಗೆ ಹಾಲಿನ ಟೆಂಪೋ ಢಿಕ್ಕಿ ಹೊಡೆದ ಘಟನೆ ಉಡುಪಿಯ ಪೆರಂಪಳ್ಳಿ-ಮಣಿಪಾಲ ಮುಖ್ಯರಸ್ತೆಯಲ್ಲಿ ನಡೆದಿದೆ. ಅಪಘಾತದಲ್ಲಿ ಮಹಿಳೆ ಅದೃಷ್ಟವಶಾತ್ ಪ್ರಾಣಾಪಯದಿಂದ ಪಾರಾಗಿದ್ದಾರೆ.
ಉಡುಪಿಯ ಪೆರಂಪಳ್ಳಿ – ಮಣಿಪಾಲ ಮುಖ್ಯ ರಸ್ತೆಯಲ್ಲಿ ಇಂದು ಬೆಳಿಗ್ಗೆ ಈ ಘಟನೆ ನಡೆದಿದ್ದು, ಮಹಿಳೆ ಸ್ಕೂಟರ್ ನಲ್ಲಿ ರಸ್ತೆಯ ಇನ್ನೊಂದು ಬಂದಿಗೆ ಹೋಗುತ್ತಿರುವಾಗ ಬಂದ ಹಾಲಿನ ಟೆಂಪೋ ಡಿಕ್ಕಿಯಾಗಿದೆ.

ಢಿಕ್ಕಿಯ ರಭಸಕ್ಕೆ ಮಹಿಳೆಯ ರಸ್ತೆಯ ಬದಿಗೆ ಬಿದ್ದಿದ್ದಾರೆ. ಈ ಘಟನೆಯಲ್ಲಿ ಯಾವುದೇ ತೀವ್ರ ತರದ ಗಾಯಗಳಿಲ್ಲದೇ ಮಹಿಳೆ ಪಾರಾಗಿದ್ದು, ಹಾಲಿನ ವಾಹನ ಬರುತ್ತಿರುವುದನ್ನು ಗಮನಿಸದೇ ರಸ್ತೆ ದಾಟಲು ಯತ್ನಿಸಿದಾಗ ಈ ಅಪಘಾತ ಸಂಭವಿಸಿದೆ. ತಕ್ಷಣವೇ ಸ್ಥಳದಲ್ಲಿದ್ದ ಬಸ್ ಸಿಬ್ಬಂದಿ, ಸಾರ್ವಜನಿಕರಿಂದ ಮಹಿಳೆಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಘಟನೆಯ ಸಿಸಿಟಿವಿ ವಿಡಿಯೋ ಲಭ್ಯವಾಗಿದ್ದು, ಮಹಿಳೆಯ ಸಾವಿನ ಬಾಗಿಲು ತಟ್ಟಿ ಬಂದಿದ್ದಾರೆ.