ಅತಿಥಿ ಶಿಕ್ಷಕಿಯೊಬ್ಬರ ಮೇಲೆ ಅತ್ಯಾಚಾರ ಆರೋಪ ಶಾಲಾ ಮುಖ್ಯೋಪಾಧ್ಯಾಯನ ಬಂಧನ

ಉಪ್ಪಿನಂಗಡಿ ನವೆಂಬರ್ 13: ಶಾಲಾ ಅತಿಥಿ ಶಿಕ್ಷಕಿಯೊಬ್ಬರ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂಬ ಆರೋಪದ ಮೇಲೆ ಶಾಲೆಯ ಮುಖ್ಯೋಪಾಧ್ಯಾಯರನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಬಂಧಿತ ಆರೋಪಿಯನ್ನು ಪದ್ಮುಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಮಂಜುನಾಥ್ (41) ಎಂದು ಗುರುತಿಸಲಾಗಿದೆ. ಶಾಲಾ ಮುಖ್ಯೋಪಾಧ್ಯಾಯ ಮಂಜುನಾಥ್ ಎಂಬವರು ತನ್ನ ಶಿಕ್ಷಕಿ ಕೆಲಸವನ್ನು ಖಾಯಂಗೊಳಿಸುವ ಆಸೆಯೊಡ್ಡಿ ತನ್ನ ಮೇಲೆ ಕಳೆದ ಎಪ್ರಿಲ್ 14ರಂದು ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದಾರೆ. ನವೆಂಬರ್ 10 ರಂದು ಈ ಘಟನೆ ಬಗ್ಗೆ ದೂರು ನೀಡಿರುವ ಅತಿಥಿ ಶಿಕ್ಷಕಿ, ಆ ಸಂದರ್ಭ ನಡೆದ ಘಟನೆಯಿಂದ ಮಾನಸಿಕವಾಗಿ ನೊಂದ ನಾನು ಬೆದರಿ ತಕ್ಷಣಕ್ಕೆ ನಾನು ಪೊಲೀಸರಿಗೆ ದೂರು ನೀಡಿಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಆರೋಪಿ ಮಂಜುನಾಥ್‍ನನ್ನು ಮಂಗಳವಾರ ಉಪ್ಪಿನಂಗಡಿಯಲ್ಲಿ ಬಂಧಿಸಿದ್ದು, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Facebook Comments

comments