Connect with us

LATEST NEWS

ತೆನೆ ಹಬ್ಬ ಪ್ರಯುಕ್ತ ನಾಳೆ ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ

ತೆನೆ ಹಬ್ಬ ಪ್ರಯುಕ್ತ ನಾಳೆ ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ

ಮಂಗಳೂರು ಸೆಪ್ಟೆಂಬರ್ 7: ಅನಾದಿಕಾಲದಿಂದಲೂ ಕರಾವಳಿ ಕ್ರೈಸ್ತರು ಪ್ರತಿವರ್ಷ ಸೆಪ್ಟೆಂಬರ್ 8 ರಂದು ಆಚರಿಸುವ ತೆನೆಹಬ್ಬ/ ಕೊಯಿಲು ಹಬ್ಬ/ಮರಿಯ ಜಯಂತಿ ಹಬ್ಬದ ನಿಮಿತ್ತ ನಾಳೆ ಸೆಪ್ಟೆಂಬರ್ 8 ರಂದು ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಕರಾವಳಿಯಲ್ಲಿ ಕ್ರೈಸ್ತ ಭಾಂದವರು ಈ ಹಬ್ಬವನ್ನು ಸೆಪ್ಟೆಂಬರ್ 8 ರಂದು ಆಚರಿಸುತ್ತಿದ್ದು, ಕೆಥೋಲಿಕ್ ಸಭಾ ಮಂಗಳೂರು , ಹಾಗೂ ಸಾರ್ವಜನಿಕರು ವಿಧ್ಯಾರ್ಥಿಗಳು ಈ ದಿನವನ್ನು ಸರಕಾರಿ ರಜೆಯನ್ನಾಗಿ ಘೋಷಿಸಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದ್ದರು.

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸೆಪ್ಟೆಂಬರ್ 8 ರಂದು ಕೆಲವು ಶಿಕ್ಷಣ ಸಂಸ್ಥೆಗಳು ಮಾತ್ರ ವಿಧ್ಯಾರ್ಥಿಗಳಿಗೆ ರಜೆ ನೀಡುತ್ತಿದ್ದು, ಉಳಿದ ಶಿಕ್ಷಣ ಸಂಸ್ಥೆಗಳು ಕಾರ್ಯಾಚರಿಸುತ್ತಿದ್ದವು, ಇದು ವಿಧ್ಯಾರ್ಥಿಗಳಿಗೆ ತಾರತಮ್ಯ ಮಾಡಿದಂತಾಗುತ್ತಿದ್ದು, ಅಲ್ಲದೆ ಸಾಂಪ್ರದಾಯಿಕವಾಗಿ ಹಬ್ಬ ಆಚರಿಸಲು ಇದು ತೊಡಕಾಗುತ್ತದೆ ಎಂದು ಹಾಗೂ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕ್ರೈಸ್ತ ಸಂಘಟನೆಗಳು ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಿದ್ದರು.

ಈ ಹಿನ್ನಲೆಯಲ್ಲಿ ಸಾರ್ವಜನಿಕರು ಮತ್ತು ವಿಧ್ಯಾರ್ಥಿಗಳ ಮನವಿಯನ್ನು ಪುರಸ್ಕರಿಸಿದ ಜಿಲ್ಲಾಡಳಿತ ಸೆಪ್ಟೆಂಬರ್ 8 ರಂದು ಸದ್ರಿ ವಿವೇಚನಾಧಿಕಾರವನ್ನು ಬಳಸಿಕೊಂಡು ಶಾಲೆಗಳಿಗೆ ಇರುವ ಅಗತ್ಯಕ್ಕನುಗುಣವಾಗಿ ವರ್ಷದಲ್ಲಿ 4 ದಿನಗಳ ರಜೆಯ ಪೈಕಿ ಒಂದನ್ನು ಸೆಪ್ಟೆಂಬರ್ 8 ರಂದು ರಜೆ ನೀಡುವುದು ಸೂಕ್ತ ಎಂದು ಮನಗಂಡು, ಈ ಸಾಲಿನಲ್ಲಿ ಸೆಪ್ಟೆಂಬರ್ 8 ರಂದು ರಜೆಯನ್ನು ಘೋಷಿಸಲು ಸಂಬಂಧಪಟ್ಟ ಎಲ್ಲಾ ಶಿಕ್ಷಣ ಸಂಸ್ಥೆ ಹಾಗೂ ಶಾಲೆಗಳಿಗೆ ಜಿಲ್ಲಾಡಳಿತ ನಿರ್ದೇಶನ ನೀಡಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *