DAKSHINA KANNADA
ಅಪಾಯಕಾರಿ ಶಾಲಾ ಕಟ್ಟಡ ಹೊಂದಿದ್ದ ಭಕ್ತಕೋಡಿ ಸರಕಾರಿ ಶಾಲೆಗೆ ಶಿಕ್ಷಣ ಅಧಿಕಾರಿಗಳ ಭೇಟಿ
ಪುತ್ತೂರು ಜನವರಿ 13: ಅಪಾಯಕಾರಿಯಾಗಿ ಬೀಳುವ ಪರಿಸ್ಥಿತಿಯಲ್ಲಿದ್ದ ಭಕ್ತಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಕ್ಕಳನ್ನು ತರಗತಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದಾರೆ.
ಭಕ್ತಕೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮಸ್ಯೆ. ಶಾಲೆಯಲ್ಲಿ ಮಕ್ಕಳ ದುಸ್ಥಿತಿಯ ಬಗ್ಗೆ ಮಾಧ್ಯಮಗಳಲ್ಲಿ ವರದಿ ಭಿತ್ತರವಾದ ಹಿನ್ನಲೆಯಲ್ಲಿ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕಟ್ಟಡದಲ್ಲಿ ಮಕ್ಕಳಿಗೆ ತರಗತಿ ಮಾಡುವುದು ಅಪಾಯ ಎನ್ನುವುದನ್ನು ಮನದಟ್ಟು ಮಾಡಿಕೊಂಡ ಅಧಿಕಾರಿಗಳು ಅಪಾಯಕಾರಿ ಕಟ್ಟಡದಲ್ಲಿ ಮಕ್ಕಳಿಗೆ ತರಗತಿ ನಡೆಸುವುದನ್ನು ನಿರ್ಬಂಧಿಸಿದ್ದು. ಅಲ್ಲದೆ ಕಟ್ಟಡದ ಸುತ್ತ ಮಕ್ಕಳು ಹೋಗದಂತೆ ತಡೆಯನ್ನೂ ನಿರ್ಮಿಸಿದ್ದಾರೆ. ಶಾಲೆಯಲ್ಲಿರುವ ಮಕ್ಕಳಿಗೆ ಪರ್ಯಾಯ ತರಗತಿ ವ್ಯವಸ್ಥೆಯನ್ನೂ ಮಾಡಲಾಗಿದೆ.