BELTHANGADI
ಟಯರ್ ಖರೀದಿ ಹೆಸರಿನಲ್ಲಿ ಲೂಟಿ, ಧರ್ಮಸ್ಥಳ ಕೆ.ಎಸ್.ಆರ್.ಟಿ.ಸಿ ಡಿಪೋದಲ್ಲಿ ನಡೆಯುತ್ತಿದೆ ದೋಚುವ ಪೈಪೋಟಿ
ಟಯರ್ ಖರೀದಿ ಹೆಸರಿನಲ್ಲಿ ಲೂಟಿ, ಧರ್ಮಸ್ಥಳ ಕೆ.ಎಸ್.ಆರ್.ಟಿ.ಸಿ ಡಿಪೋದಲ್ಲಿ ನಡೆಯುತ್ತಿದೆ ದೋಚುವ ಪೈಪೋಟಿ
ಬೆಳ್ತಂಗಡಿ ಜೂನ್ 5: ಧರ್ಮಸ್ಥಳ ಕೆ.ಎಸ್.ಆರ್.ಟಿ.ಸಿ ಡಿಪೋದಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ಬಸ್ ಚಾಲಕನೋರ್ವ ಬಯಲಿಗೆಳೆದಿದ್ದಾರೆ.
ಬಸ್ ಗಳಿಗೆ ಹೊಸ ಟಯರ್ ಹೆಸರಿನಲ್ಲಿ ರಿಸೋಲ್ ಟಯರ್ ಗಳನ್ನು ಹಾಕಲಾಗುತ್ತಿದೆ ಎನ್ನುವ ಆರೋಪವೂ ಚಾಲಕರದ್ದಾಗಿದೆ. ಅಲ್ಲದೆ ಬಸ್ ಡಿಪೋದಲ್ಲಿ ಸೇವೆಯಲ್ಲಿರುವ ಯಾವೊಬ್ಬ ಸಿಬ್ಬಂದಿಯೂ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಲಾಗಿದೆ.
ತಮಗೆ ಬೇಕಾದ ಸಮಯಕ್ಕೆ ಡಿಪೋಕ್ಕೆ ಬರುವ ಈ ಸಿಬ್ಬಂದಿಗಳು, ತಮಗೆ ತೋಚಿದ ಸಮಯದಲ್ಲಿ ಡಿಪೋದಿಂದ ಹೋಗುತ್ತಿದ್ದಾರೆ. ಸಂಚಾರ ಮುಗಿಸಿ ವಾಶ್ ಗೆ ಬರುವ ಬಸ್ ಗಳನ್ನು ಇಲ್ಲಿ ನಿಯೋಜಿಸಿದ ಸಿಬ್ಬಂದಿಗಳು ತೊಳೆಯುತ್ತಿಲ್ಲ. ರಾತ್ರಿ ಪೂರ್ತಿ ಬಸ್ ಚಾಲನೆ ಮಾಡಿ ಬಂದ ಚಾಲಕನೇ ಬೆಳಗ್ಗೆ ಮತ್ತೆ ಬಸ್ ತೊಳೆಯಬೇಕಾದ ಸ್ಥಿತಿ ಇಲ್ಲಿದೆ.
ಅಲ್ಲದೆ ಬಸ್ ಗಳಿಗೆ ಬೇಕಾದ ಸ್ಪೇರ್ ಪಾರ್ಟ್ ಗಳಲ್ಲೂ ಇಲ್ಲಿ ಗೋಲ್ಮಾಲ್ ನಡೆಯುತ್ತಿದೆ ಎನ್ನುವ ಆರೋಪವನ್ನು ಇಲ್ಲಿನ ವ್ಯವಸ್ಥೆಯಿಂದ ಬೇಸತ್ತ ಸಿಬ್ಬಂದಿಗಳು ಬಹಿರಂಗವಾಗಿಯೇ ವ್ಯಕ್ತಪಡಿಸುತ್ತಿದ್ದಾರೆ. ಈ ಡಿಪೋಗಳ ಮೇಲುಸ್ತುವಾರಿಯನ್ನು ನೋಡಿಕೊಳ್ಳಬೇಕಾದ ಪುತ್ತೂರು ಕೆ.ಎಸ್.ಆರ್.ಟಿ.ಸಿ ಡಿ.ಸಿ ಗೆ ಪ್ರಯಾಣಿಕರು ಸೇರಿದಂತೆ ಎಲ್ಲಾ ಕಡೆಗಳಿಂದಲೂ ದೂರು ಬಂದರೂ ಏನೂ ನಡೆದಿಲ್ಲ ಎನ್ನುವಂತೆ ಡಿ.ಸಿ ಯವರು ವರ್ತಿಸುತ್ತಿದ್ದಾರೆ ಎನ್ನುವ ಆರೋಪಗಳೂ ಇವೆ.
ಪ್ರಯಾಣಿಕರ ದೂರನ್ನು ಸ್ವೀಕರಿಸಲೆಂದೇ ಸರಕಾರದ ವತಿಯಿಂದ ಇವರಿಗೆ ಉಚಿತವಾಗಿ ನೀಡಿದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೂ, ಕರೆ ಸ್ವೀಕರಿಸದೆ ಇಲ್ಲ ಹಲವಾರು ದೂರುಗಳೂ ಈ ಮೇಲಾಧಿಕಾರಿಗಳ ವಿರುದ್ಧವಿದೆ.