Connect with us

DAKSHINA KANNADA

ಸವಣೂರು – ಅಡಿಕೆ ಕಳ್ಳತನದ ವೇಳೆ ಸಿಕ್ಕಿಬಿದ್ದ ಆರೋಪಿಗಳಿಂದ ತಲವಾರ್ ದಾಳಿ

ಸವಣೂರು ನವೆಂಬರ್ 26: ಅಡಿಕೆ ಕಳ್ಳತನಕ್ಕೆ ಬಂದಿದ್ದ ಆರೋಪಿಗಳು ಕಳ್ಳತನದ ವೇಳೆ ಫಾರ್ಮನ್ ಮಾಲಕರ ಪುತ್ರನ ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದ್ದು, ಈ ವೇಳೆ ಕಳ್ಳರು ಮಾಲಕರ ಪುತ್ರನ ಮೇಲೆ ತಲವಾರ್ ನಿಂದ ದಾಳಿಗೆ ಯತ್ನಿಸಿದ್ದಾರೆ.

ಎಡಪತ್ಯ ಫಾರ್ಮ್ ಮಾಲಕ ರಾಮಚಂದ್ರ ಎಡಪತ್ಯ ಅವರ ಪುತ್ರ ನಿಷ್ಕಲ್‌ ರಾಮ್‌ ಎಡಪತ್ಯ ತಲವಾರು ದಾಳಿಗೆ ಒಳಗಾದವರು. ದಾಳಿಯ ವೇಳೆ ಕೈಗೆ ಗಾಯವಾಗಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳ್ಳರು ಎಡಪತ್ಯ ಫಾರ್ಮ್ ನ ಸೋಲಾರ್ ಗೂಡಿನಲ್ಲಿ ಒಣಹಾಕಿದ್ದ ಅಡಿಕೆಗಳನ್ನು ಕದ್ದು ಕಾರಿಗೆ ತುಂಬಿಸುತ್ತಿದ್ದರು. ಈ ವೇಳೆ ಮೈಸೂರಿನಿಂದ ಮನೆಗೆ ಬರುತ್ತಿದ್ದ ನಿಷ್ಕಲ್‌ ಅವರು ಕಳ್ಳರನ್ನು ನೋಡಿದ್ದಾರೆ. ಕೂಡಲೇ ಅವರು ಕಳ್ಳರನ್ನು ಪ್ರಶ್ನಿಸಿದ್ದು, ಈ ವೇಳೆ ಕಳ್ಳರು ಬೆದರಿಕೆ ಹಾಕಿದರಲ್ಲದೇ ತಲವಾರಿನಿಂದ ದಾಳಿ ಮಾಡಿದ್ದು, ಕೈಗೆ ಕೈಗೆ ಗಾಯವಾಗಿದೆ. ಈ ವೇಳೆ ಅವರು ಕಿರುಚಿದ್ದರಿಂದ ಮನೆಯವರು ಅಲ್ಲಿಗೆ ಬಂದು ಕಳ್ಳರಲ್ಲಿ ಓರ್ವನನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದಾರೆ.

ಬಶೀರ್‌ ಸಿಕ್ಕಿಬಿದ್ದ ಕಳ್ಳ. ಕಳೆದ ಹಲವು ದಿನಗಳಿಂದ ನಿರಂತರ ಅಡಿಕೆ ಕಳ್ಳತನ ಮಾಡುತ್ತಿರುವುದನ್ನು ಒಪ್ಪಿಕೊಂಡಿರುವ ಬಶೀರ್‌, ಸುಮಾರು 5 ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ಅಡಿಕೆಯನ್ನು ಸುಲಿದಿಟ್ಟ ಗೋದಾಮು ಹಾಗೂ ಸೋಲಾರ್‌ಕೊಠಡಿಯಿಂದ ಕಳವು ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಇನ್ನೋರ್ವ ಕಳ್ಳ ಹಕೀಂನ ಸೂಚನೆಯ ಮೇರೆಗೆ ಇಲ್ಲಿಗೆ ಆಗಮಿಸಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ವೀಡಿಯೋದಲ್ಲಿ ಕಳ್ಳ ಒಪ್ಪಿಕೊಂಡಿದ್ದಾನೆ. ಇರ್ಷಾದ್‌ ಎಂಬವರಿಗೆ ಸೇರಿದ ಕಾರಿನಲ್ಲಿ ಕಳ್ಳರು ಬಂದಿದ್ದು, ಬಶೀರ್‌ನನ್ನು ಫಾರ್ಮ್ ಮಾಲಕರು ಬೆಳ್ಳಾರೆ ಠಾಣೆಗೆ ಒಪ್ಪಿಸಿದ್ದಾರೆ

Share Information
Continue Reading
Advertisement
Click to comment

Leave a Reply

Your email address will not be published. Required fields are marked *