BELTHANGADI
ಸೌದಿ ಅರೇಬಿಯಾದಲ್ಲಿ ಬೆಳ್ತಂಗಡಿ ಮೂಲದ ಹೈದರ್ ಅಲಿ ಅವರ ಎರಡು ವರ್ಷದ ಮಗು ಜ್ವರದಿಂದ ನಿಧನ

ಬೆಳ್ತಂಗಡಿ ಮಾರ್ಚ್ 05:ಜ್ವರದಿಂದಾಗಿ 2 ವರ್ಷದ ಪುಟಾಣಿ ಮಗು ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ ಘಟನೆ ಸೌದಿ ಅರೇಬಿಯಾದ ಬುರೈದಾದಲ್ಲಿ ಮಾರ್ಚ್ 2 ರಂದು ನಡೆದಿದೆ.

ಕನ್ಯಾಡಿಯ ಅಜಿಕುರಿ ನಿವಾಸಿ, ಸಿವಿಲ್ ಗುತ್ತಿಗೆದಾರರಾಗಿದ್ದ ದಿ. ಯಾಕೂಬ್ ಅವರ ಪುತ್ರ ಹೈದರ್ ಅಲಿ ಅವರ ಎರಡು ವರ್ಷದ ಮಗು ಮುಹಮ್ಮದ್ ಅಭಿಯಾನ್ (2) ಮೃತ ಪಟ್ಟ ಪುಟಾಣಿ ಮಗು
ಹೈದರ್ ಅಲಿ ಮತ್ತು ಮಹ್‌ರೂಫಾ ದಂಪತಿಯ ಎರಡು ಗಂಡು ಮತ್ತು ಒಂದು ಹೆಣ್ಣು ಮಕ್ಕಳ ಪೈಕಿ ಕೊನೆಯವನಾಗಿರುವ ಮುಹಮ್ಮದ್ ಅಭಿಯಾನ್ ಅವರಿಗೆ ಕೇವಲ ಒಂದು ದಿನದ ಮಟ್ಟಿಗೆ ಜ್ವರ ಕಾಣಿಸಿಕೊಂಡಿತ್ತು. ತಕ್ಷಣವೇ ಮನೆಯವರು ಮಗುವಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಜ್ವರ ಉಲ್ಬಣಿಸಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆಯೇ ಮಗು ಅಸುನೀಗಿದೆ ಎಂದು ತಿಳಿದುಬಂದಿದೆ.
ಮೃತ ಮಗುವಿನ ಅಂತ್ಯಸಂಸ್ಕಾರ ಸೌದಿ ಕಾನೂನು ಪ್ರಕ್ರಿಯೆ ನಡೆದ ಬಳಿಕ ಸೌದಿ ಅರೇಬಿಯಾದಲ್ಲೇ ಮಾ.4 ರಂದು ಭಾರತೀಯ ಕಾಲಮಾನದಂತೆ ಮಧ್ಯಾಹ್ನ ನಡೆದಿದೆ.

1 Comment