Connect with us

    DAKSHINA KANNADA

    ಜಗದೀಶ್ ಕಾರಂತರ ಬಂಧನಕ್ಕೆ ಪೋಲಿಸ್ ಇಲಾಖೆಯ ದುರ್ಬಳಕೆ: ಸತ್ಯಜೀತ್ ಸುರತ್ಕಲ್

    ಜಗದೀಶ್ ಕಾರಂತರ ಬಂಧನಕ್ಕೆ ಪೋಲಿಸ್ ಇಲಾಖೆಯ ದುರ್ಬಳಕೆ: ಸತ್ಯಜೀತ್ ಸುರತ್ಕಲ್

    ಪುತ್ತೂರು,ಸೆಪ್ಟಂಬರ್ 30: ಜಗದೀಶ್ ಕಾರಂತರ ವಿರುದ್ಧ ಸರಕಾರ ಪೋಲೀಸ್ ಇಲಾಖೆಯನ್ನು ಬಳಸಿಕೊಂಡು ನಡೆಸಿದ ಷಡ್ಯಂತ್ರಕ್ಕೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ ಎಂದು ಬಿಜೆಪಿ ಮುಖಂಡ ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ.

    ಪುತ್ತೂರು ನ್ಯಾಯಾಲಯ ಹಿಂದೂ ಜಾಗರಣ ವೇದಿಕೆಯ ಮುಖಂಡ ಜಗದೀಶ್ ಕಾರಂತರಿಗೆ ನೀಡಿದ ಜಮೀನು ಸತ್ಯಕ್ಕೆ ಸಂತ ಜಯ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
    ಯಾವ ಕಾರಣಕ್ಕೆ ಅವರ ವಿರುಧ ಪೋಲೀಸರು 153(a),505/ 1 b ,505 (2) 189 ಹಾಗೂ 504 ಸೆಕ್ಷನ್ ಮೂಲಕ ಪ್ರಕರಣ ದಾಖಲಿಸಿದ್ದರು. ಸೆಪ್ಟಂಬರ್ 29 ರ ಮಧ್ಯಾಹ್ನ ಪೋಲೀಸರು ಜಗದೀಶ್ ಕಾರಂತರನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸ ಪುತ್ತೂರಿಗೆ ಕರೆ ತಂದಿದ್ದರು. ರಾತ್ರಿ ಸುಮಾರು 1 ಗಂಟೆಗೆ ಪೋಲೀಸರು ಜಗದೀಶ್ ಕಾರಂತರನ್ನು ಪುತ್ತೂರು ನ್ಯಾಯಾಧಿಶರ ಗೃಹ ಕಛೇರಿಗೆ ಹಾಜರುಪಡಿಸಿದ್ದರು. ಇದನ್ನು ಪ್ರಶ್ನಿಸಿ ಜಗದೀಶ್ ಕಾರಂತ ಪರ ವಕೀಲರು ಜಮೀನು ಅರ್ಜಿಯ ಜೊತೆಗೆ ಮದ್ಯಂತರ ಅರ್ಜಿಯನ್ನೂ ಸಲ್ಲಿಸಿದ್ದರು.                                  ಪೋಲೀಸರು ಜಗದೀಶ್ ಕಾರಂತರನ್ನು ಬಂಧಿಸುವ ಮೊದಲು ದೇಶದ ಸರ್ವೋಚ್ಛ ನ್ಯಾಯಾಲಯದ ಮೂಲಭೂತ ತತ್ವಗಳನ್ನು ಪರಿಪಾಲಿಸಿಲ್ಲ, ಅಲ್ಲದೆ ಇಂಥ ಪ್ರಕರಣಗಳಲ್ಲಿ ಸಂಬಂಧಪಟ್ಟ ವ್ಯಕ್ತಿಗೆ ನೋಟೀಸ್ ಜಾರಿಯನ್ನು ಮಾಡಬೇಕೆಂಬ ನಿಯಮವಿದ್ದರೂ, ಪೋಲೀಸರು ಇದನ್ನು ಮಾಡಿಲ್ಲ. ಅಲ್ಲದೆ ಈ ಪ್ರಕರಣದಲ್ಲಿ ಪೋಲೀಸರಿಗೆ ಬಂಧನದಂತಹ ಕ್ರಮದ ಅನಿವಾರ್ಯತೆಯೂ ಇರಲಿಲ್ಲ. ಅಲ್ಲದೆ ಪ್ರಕರಣ ಸಂಭವಿಸಿ 5 ದಿನಗಳಾದ ಬಳಿಕ ದೂರು ದಾಖಲಿಸಲು ತೆಗೆದುಕೊಂಡ ವಿಳಂಬ, ಕೇಸು ದಾಖಲಿಸಿದ 9 ದಿನಗಳ ಬಳಿಕ ಅವರನ್ನು ಬಂಧಿಸಿರುವುದು ಎಲ್ಲವೂ ಮೇಲ್ನೋಟಕ್ಕೆ ನಡೆಸಿದ ಸಂಚು ಎನ್ನುವುದನ್ನು ನ್ಯಾಯಾಧೀಶರ ಗಮನಕ್ಕೆ ಕಾರಂತರ ಪರ ವಕೀಲರು ತಂದಿದ್ದಾರೆ.

    ಅಲ್ಲದೆ ಕಾರಂತರಂತಹ ಹಿರಿಯರನ್ನು ಬಂಧಿಸುವ ವೇಳೆ ಅವರ ಆರೋಗ್ಯವನ್ನೂ ಪರಿಗಣನೆಗೆ ತೆಗೆದುಕೊಂಡಿಲ್ಲ ಎನ್ನುವುದನ್ನು ನ್ಯಾಯಾಧೀಶರಿಗೆ ತಿಳಿಸಿರುವ ಹಿನ್ನಲೆಯಲ್ಲಿ ನ್ಯಾಯಾಧೀಶರು ಜಗದೀಶ್ ಕಾರಂತರಿಗೆ ಅಕ್ಟೋಬರ್ 3 ರ ವರೆಗೆ ಷರತ್ತುಬದ್ಧ ಜಮೀನನ್ನು ನೀಡಿದ್ದಾರೆ.

    ವಿಡಿಯೋಗಾಗಿ…

    Share Information
    Advertisement
    Click to comment

    Leave a Reply

    Your email address will not be published. Required fields are marked *