Connect with us

LATEST NEWS

ನಾರಾಯಣ ಗುರು ನಿಗಮ ರಚನೆಗೆ ಡಿ. 31 ಡೆಡ್‌ಲೈನ್ ಕೊಟ್ಟ ಸತ್ಯಜೀತ್ ಸುರತ್ಕಲ್..!

ಮಂಗಳೂರು: ಬಿಲ್ಲವ ಸಮುದಾಯದ ಬಹುದೊಡ್ಡ ಬೇಡಿಕೆಯಾಗಿರುವ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ರಚನೆ ಮಾಡಿ 500 ಕೋಟಿ ರು. ಅನುದಾನವನ್ನು ಮೀಸಲಿಡಲು ಶ್ರೀ ನಾರಾಯಣ ಗುರು ವಿಚಾರ ವೇದಿಕೆಯು ರಾಜ್ಯ ಸರಕಾರಕ್ಕೆ ಡಿ.31ರ ಗಡುವು ನೀಡಿದೆ.

ಮಂಗಳೂರಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಈ ಹಿಂದೆ ಮುಖ್ಯಮಂತ್ರಿ ಅವರನ್ನು ಭೇಟಿಯಾದಾಗ ಅಧಿವೇಶನದ ಸಮಯದಲ್ಲಿ ನಿಗಮ ರಚನೆ ಮಾಡಲು ತೊಡಕಾಗುತ್ತದೆ. ಅದರ ಬಳಿಕ ಮಾಡುವುದಾಗಿ ಭರವಸೆ ನೀಡಿದ್ದರು. ಇದೀಗ ಅಧಿವೇಶನ ಮುಗಿದು 15 ದಿನಗಳ ಒಳಗಾಗಿ ನಿಗಮ ರಚನೆ ಮಾಡಬೇಕು. ಇಲ್ಲದಿದ್ದರೆ ಜ.1 ರ ನಂತರ ಸಮಾಜದ ಎಲ್ಲ ಸ್ವಾಮೀಜಿಗಳು, ಸಂಘ ಸಂಸ್ಥೆಗಳು, ಸಂಘಟನೆಗಳು, ಕ್ಷೇತ್ರದ ಪ್ರಮುಖರನ್ನು ಒಗ್ಗೂಡಿಸಿ ಬೀದಿಗಿಳಿದು ಜನಾಂದೋಲನ ರೂಪಿಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ. ನಾರಾಯಣ ಗುರು ಜಯಂತಿ ವೇಳೆ ಅನುದಾನ ಘೋಷಿಸಬಹುದೆಂಬ ನಿರೀಕ್ಷೆಯಿತ್ತು. ಆದರೆ ಅದೂ ಹುಸಿಯಾಯಿತು. ಇತ್ತೀಚೆಗೆ ನಡೆದ ಸಮುದಾಯದ ಸಭೆಯಲ್ಲಿ ಸಮಾಜದ ಎಲ್ಲಾ ನಾಯಕರು ಈ ಬಗ್ಗೆ ಬೇಡಿಕೆ ಇಟ್ಟಿದ್ದರು. ಆದರೆ ಅಧಿವೇಶನದಲ್ಲಿ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡಲು ಅವಕಾಶವಿಲ್ಲವೆಂದು ಸರಕಾರ ನುಣುಚಿಕೊಂಡಿದೆ‌. ಅಧಿವೇಶನದ ಬಳಿಕ ಸಮಾಜದ ಪ್ರಮುಖರ ಸಭೆ ಕರೆದು ಕ್ರಮ ಕೈಗೊಳ್ಳುವುದಾಗಿ ಸರಕಾರ ಹೇಳಿದೆ. ಆದ್ದರಿಂದ ಡಿಸೆಂಬರ್ 31ರೊಳಗೆ 500 ಕೋಟಿ ರೂ. ಅನುದಾನ ನೀಡಬೇಕು. ಇಲ್ಲದಿದ್ದಲ್ಲಿ ಜ.1ರ ಬಳಿಕ ಹೋರಾಟ ಅನಿವಾರ್ಯ. ಅಲ್ಲದೆ ಕಾಂತರಾಜು ಆಯೋಗ ವರದಿ ಜಾರಿಗೊಳಿಸಬೇಕು. ಪ್ರವರ್ಗ – ಎ ಯಲ್ಲಿ ಈಗಿರುವ 102 ಜಾತಿ ಸಮುದಾಯಗಳಿಗಿರುವ 15ಪ್ರತಿಶತ ಮೀಸಲಾತಿಯಲ್ಲಿ ಯಾವುದೇ ವ್ಯತ್ಯಾಸ ಆಗಬಾರದು ಎಂದು ಸತ್ಯಜಿತ್‌ ಸುರತ್ಕಲ್ ಎಚ್ಚರಿಕೆ ನೀಡಿದರು. ಜತೆಗೆ ಮುಳುಗಡೆ ಸಂತ್ರಸ್ತರು, ಸಿಗಂದೂರು ಕ್ಷೇತ್ರದ ಗೊಂದಲ ನಿವಾರಣೆ, ಮಂಗಳೂರು- ಶಿವಮೊಗ್ಗ ವಿಮಾನ ನಿಲ್ದಾಣಗಳಿಗೆ ನಾಮಕರಣ, ಜಿಲ್ಲಾ ತಾಲೂಕು ಕೇಂದ್ರಗಳಲ್ಲಿ ಅಧ್ಯಯನ ಪೀಠ, ಹಾಸ್ಟೆಲ್ ನಿರ್ಮಾಣಗಳಿಗೆ ಸ್ಥಳ ಮೀಸಲು ಮುಂತಾದ ಬೇಡಿಕೆಗಳ ಬಗ್ಗೆಯೂ ಇನ್ನು 15 ದಿನದೊಳಗೆ ಸ್ಪಷ್ಟ ತೀರ್ಮಾನವನ್ನು ಸರಕಾರ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ರಾಕೇಶ್ ಪೂಜಾರಿ, ಶಶಿಧರ್ ಅಮೀನ್, ನವೀನ್ ಪೂಜಾರಿ ಮತ್ತಿತರರಿದ್ದರು.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *