FILM
ಕಾರು ಅಪಘಾತದಲ್ಲಿ ಕಿರುತೆರೆ ನಟಿ ಸಾವು….!!

ಮುಂಬೈ ಮೇ 24: ಜನಪ್ರಿಯ ಧಾರಾವಾಹಿ ‘ಸಾರಾಭಾಯಿ ವರ್ಸಸ್ ಸಾರಾಭಾಯ್’ ಖ್ಯಾತಿಯ ನಟಿ ವೈಭವಿ ಉಪಾಧ್ಯಾಯ ಅಪಘಾತದಲ್ಲಿ ಸಾವನಪ್ಪಿದ್ದಾರೆ.
ಮಾಹಿತಿ ಪ್ರಕಾರ, ನಟಿಯ ಕಾರು ಕುಲುವಿನ ಬಂಜಾರ್‌ನಲ್ಲಿ ಎಂಬಲ್ಲಿ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದಿದೆ ಎಂದು ಹೇಳಲಾಗಿದೆ. ಈ ವೇಳೆ ವೈಭವಿ ಉಪಾಧ್ಯಾಯ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಈ ಕಾರಿನಲ್ಲಿ ವೈಭವಿ ಅವರ ಭಾವಿ ಪತಿ ಇದ್ದು ಅವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.

ಈ ದುಃಖದ ಸುದ್ದಿಯನ್ನು ನಿರ್ಮಾಪಕ ಜೆಡಿ ಮಜೇಥಿಯಾ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿರುವ ಅವರು, ಈ ದುರ್ಘಟನೆ ಉತ್ತರ ಭಾರತದಲ್ಲಿ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ. ಜೀವನವು ತುಂಬಾ ಅನಿರೀಕ್ಷಿತವಾಗಿದೆ. ಸಾರಾಭಾಯ್ ವರ್ಸಸ್ ಸಾರಾಭಾಯಿಯಲ್ಲಿ ಜಾಸ್ಮಿನ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಉತ್ತಮ ನಟಿ ಆತ್ಮೀಯ ಸ್ನೇಹಿತೆ ವೈಭವಿ ಉಪಾಧ್ಯಾಯ ಅವರು ನಿಧನರಾದರು ಎಂದು ಬರೆದಿದ್ದಾರೆ.
ವೈಭವಿ ಪ್ರಸಿದ್ಧ ಕಿರುತೆರೆ ನಟಿ. ಅವರು ಅನೇಕ ಟಿವಿ ಶೋಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ ‘ಸಾರಾಭಾಯಿ Vs ಸಾರಾಭಾಯ್’ ಧಾರಾವಾಹಿಯಿಂದ ನಟಿಗೆ ದೊಡ್ಡ ಮನ್ನಣೆ ಸಿಕ್ಕಿತು. ಈ ಕಾರ್ಯಕ್ರಮದಲ್ಲಿ ಆಕೆಯ ಪಾತ್ರದ ಹೆಸರು ಜಾಸ್ಮಿನ್. ನಟಿಯ ಪಾತ್ರ ಮತ್ತು ನಟನೆಯನ್ನು ಪ್ರೇಕ್ಷಕರು ಬಹಳ ಪ್ರೀತಿಯಿಂದ ನೀಡಿದರು. ಟಿವಿ ಕಾರ್ಯಕ್ರಮಗಳ ಹೊರತಾಗಿ, ವೈಭವಿ ದೀಪಿಕಾ ಪಡುಕೋಣೆ ಅವರ ಛಪಾಕ್ ಚಿತ್ರದಲ್ಲೂ ಕೆಲಸ ಮಾಡಿದ್ದಾರೆ.