Connect with us

    FILM

    ಮಾಡೆಲಿಂಗ್ ಲೋಕಕ್ಕೆ ಸಚಿನ್ ತೆಂಡೊಲ್ಕರ್ ಅವರ ಪುತ್ರಿ ಸಾರಾ ತೆಂಡೊಲ್ಕರ್

    ಮುಂಬೈ : ಕ್ರಿಕೇಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟಿದ್ದಾರೆ.


    ಫ್ಯಾಷನ್ ಡಿಸೈನಿಂಗ್‌ನಲ್ಲಿ ಆಸಕ್ತಿ ಹೊಂದಿರುವ ಸ್ಟಾರ್ ಕಿಡ್ ಸಾರಾ ತೆಂಡೂಲ್ಕರ್ ಅವರು ಈ ಬಗ್ಗೆ ಖುದ್ದು ಸಾರಾ ತೆಂಡೊಲ್ಕರ್ ಅವರೇ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಒಂದು ಪ್ರೋಮೋ ವಿಡಿಯೋ ಹಂಚಿಕೊಳ್ಳುವ ಮೂಲಕ ಮಾಡೆಲಿಂಗ್ ಲೋಕಕ್ಕೆ ಅಂಬೆಗಾಲಿಟ್ಟಿರುವ ಬಗ್ಗೆ ಹೇಳಿಕೊಂಡಿದ್ದಾರೆ.


    ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದ ಅವರು ಇಂಗ್ಲೆಂಡ್‌ನ ಯೂನಿವರ್ಸಿಟಿ ಕಾಲೇಜ್ ಆಫ್ ಲಂಡನ್‌ನಿಂದ ಮೆಡಿಸಿನ್‌ನಲ್ಲಿ ಪದವಿ ಪಡೆದರು. ಆದರೆ, ಫ್ಯಾಶನ್ ಡಿಸೈನಿಂಗ್ ಮತ್ತು ಮಾಡೆಲಿಂಗ್ ಬಗ್ಗೆ ಒಲವು ಬೆಳೆದಿದೆ
    ಇವರ ವಸ್ತ್ರ ವಿನ್ಯಾಸದ ಪ್ರೋಮೋದಲ್ಲಿ ನಟಿ ಬನಿತಾ ಸಂಧು ಮತ್ತು ತಾನಿಯಾ ಶ್ರಫ್ ಕೂಡಾ ಕಾಣಿಸಿಕೊಂಡಿದ್ದಾರೆ.

    ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಸಾರಾ ಅವರ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಈ ಹಿಂದೆ ಕೂಡಾ ಜಿಮ್ ಬಟ್ಟೆಯ ಜಾಹೀರಾತಿನಲ್ಲಿಯೂ ಸಾರಾ ತೆಂಡೊಲ್ಕರ್ ಕಾಣಿಸಿಕೊಂಡಿದ್ದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *