FILM
ನಟ ಯುವರಾಜ್ ಕುಮಾರ್ ಡೈವೋರ್ಸ್ ಪ್ರಕರಣ – ನಟಿ ಸಪ್ತಮಿ ಗೌಡ ಆಡಿಯೋ ವೈರಲ್
ಬೆಂಗಳೂರು ಜೂನ್ 23: ರಾಘವೇಂದ್ರ ರಾಜ್ ಕುಮಾರ್ ಅವರ ಮಗ ಯುವರಾಜ್ ಕುಮಾರ್ ಅವರ ಡೈವೋರ್ಸ್ ಪ್ರಕರಣಕ್ಕೆ ಸಂಬಂಧಿಸಿದಂತ ಇದೀಗ ನಟಿ ಸಪ್ತಮಿ ಗೌಡ ಅವರದ್ದು ಎನ್ನಲಾದ ಆಡಿಯೋ ಒಂದು ವೈರಲ್ ಆಗಿದೆ. ಅದರಲ್ಲಿ ನನ್ನದು ತಪ್ಪಿಲ್ಲ ಎಂದು ನಾನು ಹೇಳುವುದಿಲ್ಲ. ಆದರೆ ನಾನು ಗುರು (ಯುವ ಮೂಲ ಹೆಸರು) ನಂಬಿ ಮಾಡಿದೆ ಎಂದು ನಟಿ ಸಪ್ತಮಿ ಗೌಡ ಹೇಳಿದ್ದಾರೆ.
ನಟ ಯುವ ರಾಜ್ಕುಮಾರ್ ದಾಂಪತ್ಯದಲ್ಲಿ ಬಿರುಕಿಗೆ ನಟಿ ಸಪ್ತಮಿಗೌಡ ಕಾರಣ ಎಂದು ಯುವ ರಾಜ್ಕುಮಾರ್ ತಮ್ಮ ಪತ್ನಿ ಶ್ರೀದೇವಿ ಆರೋಪ ಮಾಡಿದ್ದಾರೆ.ಇದೀಗ ಸಪ್ತಮಿ ಗೌಡ ಅವರದ್ದು ಎನ್ನಲಾದ ಆಡಿಯೋ ಇದೀಗ ವೈರಲ್ ಆಗಿದೆ. ಈಗ ವೈರಲ್ ಆಗಿರುವ ಆಡಿಯೋ ಮಹಿಳೆಯೊಬ್ಬರು ಅಳುತ್ತಾ ರೆಕಾರ್ಡ್ ಮಾಡಿದ ಆಡಿಯೋ ಆಗಿದೆ. ಧ್ವನಿ ಸಪ್ತಮಿ ಗೌಡ ಅವರ ಧ್ವನಿಯನ್ನು ಹೋಲುತ್ತಿದೆ. ‘ಹೌದು ನನ್ನಿಂದ ಹಲವರಿಗೆ ನೋವಾಗಿದೆ. ನನ್ನದು ತಪ್ಪಿಲ್ಲ ಎಂದು ನಾನು ಹೇಳುವುದಿಲ್ಲ. ಆದರೆ ನಾನು ಗುರು (ಯುವ ಮೂಲ ಹೆಸರು) ನಂಬಿ ಮಾಡಿದೆ. ನಿಮ್ಮ ಸೆಟ್ ಅಲ್ಲಿ ಆಗಿದೆ, ಸಾರಿ ಸರ್’ ಎಂಬ ಮಾತುಗಳು ಆಡಿಯೋನಲ್ಲಿವೆ. ಈ ಆಡಿಯೋವನ್ನು ಸಪ್ತಮಿ, ವಿಜಯ್ ಕಿರಗಂದೂರು ಅವರಿಗೆ ಕಳಿಸಿದ್ದಾರೆ ಎನ್ನಲಾಗುತ್ತಿದೆ. ‘ಗುರು ಬಂದು ಎಲ್ಲವನ್ನೂ ಹೇಳಿಕೊಂಡ ಮೇಲೆ ನಾನು ಮುಂದುವರೆದೆ. ಅದು ನಿಮ್ಮ ಸೆಟ್ನಲ್ಲಿ ಆಯ್ತು, ಆಗಬಾರದಿತ್ತು, ಬೇಸರವಿದ್ದರೆ ದಯವಿಟ್ಟು ಕ್ಷಮಿಸಿ, ನನ್ನ ಸೈಡ್ ಆಫ್ ದಿ ಸ್ಟೋರಿ ಸಹ ದಯವಿಟ್ಟು ಕೇಳಿಸಿಕೊಳ್ಳಿ. ಯಾವತ್ತಾದರೂ ಸಪ್ತಮಿ ಇಷ್ಟು ಕೆಟ್ಟವಳ ಎಂದು ಅಂದುಕೊಳ್ಳುವ ಮುಂಚೆ ಏನಾಯಿತು ಎಂದು ನನ್ನಿಂದ ಒಮ್ಮೆ ಕೇಳಿಸಿಕೊಳ್ಳಿ’ ಎಂಬ ಮಾತುಗಳು ಆಡಿಯೋನಲ್ಲಿದೆ.
ಹೆಸರು ‘ನಾನು ಮೊದಲಿನಿಂದಲೂ ಹೇಳುತ್ತಲೇ ಇದ್ದೆ, ಇದೆಲ್ಲ ವರ್ಕೌಟ್ ಆಗಲ್ಲ ಎಂದು. ಅಲ್ಲದೆ ನಾನು ಎಂದಿಗೂ ಸಹ ಫ್ಯಾಮಿಲಿ ಬಿಟ್ಟು ಬಾ, ಪತ್ನಿ ಜೊತೆ ಬ್ರೇಕ್ ಅಪ್ ಮಾಡಿಕೊ ಎಂದು ಹೇಳಿಲ್ಲ ಸರ್ ನನ್ನನ್ನು ನಂಬಿ. ಬೇಕಾದರೆ ನನ್ನನ್ನು ಬೈಯ್ಯಿರಿ, ಗುರು (ಯುವ)ಗೆ ಅದು ಮೊದಲ ಸಿನಿಮಾ. ನಿಮಗೂ ಸಹ ಬಹಳ ಮುಖ್ಯವಾದ ಸಿನಿಮಾ. ನನಗೆ ಗೊತ್ತಿದೆ. ಯಾರಿಗೂ ತೊಂದರೆ ಆಗಬಾರದು ಸರ್. ನಾನು ಇದನ್ನು ಇನ್ನಷ್ಟು ಕಾಂಪ್ಲೆಕ್ಸ್ ಮಾಡುವುದಿಲ್ಲ. ಬೈಯ್ಯುವುದಾದರೆ ಬೈಯ್ಯಿರಿ’ ಎಂದು ಸಪ್ತಮಿ ಅವರದ್ದು ಎನ್ನಲಾದ ಆಡಿಯೋನಲ್ಲಿ ಹೇಳಲಾಗಿದೆ. ಶ್ರೀದೇವಿ ಹಾಗೂ ಯುವ ದಾಂಪತ್ಯದಲ್ಲಿ ಬಿರುಕು ಮೂಡಿದ ಬಳಿಕ ಯುವ ಬಾಳಿಗೆ ಸಪ್ತಮಿ ಗೌಡ ಎಂಟ್ರಿ ಆಗಿದೆ ಎನ್ನಲಾಗುತ್ತಿದೆ. ‘ಯುವ’ ಸಿನಿಮಾದ ಸೆಟ್ನಲ್ಲಿಯೇ ಶ್ರೀದೇವಿ ಬಂದು ಜಗಳ ಸಹ ಮಾಡಿದ್ದರು ಎಂಬ ಮಾತುಗಳು ಸಹ ಈ ಹಿಂದೆ ಕೇಳಿ ಬಂದಿದ್ದವು. ಇದೇ ಕಾರಣಕ್ಕೆ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಸಪ್ತಮಿ ಹಾಗೂ ಯುವ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದರು ಎನ್ನಲಾಗಿತ್ತು. ಆ ಸಮಯದಲ್ಲಿ ಸಪ್ತಮಿ ಅವರು ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ಈ ಕಳಿಸಿದ್ದ ಆಡಿಯೋ ಇದು ಎನ್ನಲಾಗುತ್ತಿದೆ.