FILM
ಸಾನ್ಯಾ ಅಯ್ಯರ್ ಹಾಟ್ ಪೋಟೋ ಶೂಟ್….ಎದೆ ಮೇಲೆ ಕೈ ಇಟ್ಟ ಅಂತಾ ಕಿರಿಕ್ ಮಾಡಿದ್ದು ನೀನೇ ಅಲ್ವಾ ಅಂತ ಕಮೆಂಟ್

ಬೆಂಗಳೂರು ಮೇ 30: ಬಿಗ್ ಬಾಸ್ ಶೋ ಮೂಲಕ ಮನೆಮಾತಾದ ಕಿರುತೆರೆ ನಟಿ ಸಾನ್ಯಾ ಅಯ್ಯರ್ ಅವರ ಹಾಟ್ ಪೋಟೋ ಶೂಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ತಮ್ಮ ಹಾಟ್ ಪೋಟೋಗಳನ್ನು ಪೋಸ್ಟ್ ಮಾಡುತ್ತಿರುವ ಸಾನ್ಯಾ ಅಯ್ಯರ್ ಇದೀಗ ಹಾಕಿರುವ ಪೋಟೋಗೆ ನೆಟ್ಟಿಗರು ಸಖತ್ ಕಮೆಂಟ್ ಮಾಡುತ್ತಿದ್ದಾರೆ.
ಪುಟ್ಟಗೌರಿ ಮದುವೆ, ಬಿಗ್ ಬಾಸ್ ಮೂಲಕ ಪರಿಚಿತರಾದ ಸಾನ್ಯ ಅಯ್ಯರ್ ಅವರು ಸಿನಿಮಾ ವಿಚಾರಕ್ಕಿಂತ ಕಿರಿಕ್ ಮಾಡಿಕೊಂಡ ವಿಚಾರವಾಗಿಯೇ ಸದ್ದು ಮಾಡಿದ್ದರು. ಬಿಗ್ ಬಾಸ್ ನಲ್ಲಿ ರೂಪೇಶ್ ಶೆಟ್ಟಿ ಜೊತೆ ಸಲುಗೆ ಬಹಳ ಸುದ್ದಿಗೆ ಗ್ರಾಸವಾಗಿತ್ತು.

ಈಗ ಖ್ಯಾತ ಬಾಲಿವುಡ್ ಫೋಟೋಗ್ರಾಫರ್ ಡಬೂ ರತ್ನಾನಿ ಅವರಿಂದ ಪೋಟೋಶೂಟ್ ಮಾಡಿಸಿಕೊಂಡಿರುವ ಸಾನ್ಯಾ…ತಮ್ಮ ಹಾಟ್ ಹಾಟ್ ಪೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ನೇರಳೆ ಬಣ್ಣದ ಕೋಟ್, ಕಪ್ಪು ಬಣ್ಣದ ಸ್ಕರ್ಟ್ ಧರಿಸಿ ಕ್ಯಾಮೆರಾಗೆ ನಟಿ ಪೋಸ್ ನೀಡಿದ್ದಾರೆ. ಈ ಫೋಟೋಶೂಟ್‌ನಲ್ಲಿ ಮತ್ತಷ್ಟು ಹಾಟ್ & ಬೋಲ್ಡ್ ಆಗಿಯೇ ಕಾಣಿಸಿಕೊಂಡಿದ್ದಾರೆ.
ಸಾನ್ಯ ಹಾಟ್ ಫೋಟೋಗೆ ಬಗೆ ಬಗೆಯ ರೀತಿಯಲ್ಲಿ ಕಾಮೆಂಟ್ ಹರಿದು ಬರುತ್ತಿದೆ. ನೀನೇ ಅಲ್ವಾ ಯಾವುದೋ ಜಾತ್ರೆಯಲ್ಲಿ ಎದೆ ಮೇಲೆ ಕೈ ಹಾಕಿದ್ದ ಅಂತಾ ಗಲಾಟೆ ಮಾಡಿ ಫೇಮಸ್ ಆಗಿದ್ದು, ಈಗ ಏನು ನಿಮ್ಮ ಅವತಾರ ಅಂತಾ ತುಸು ಖಾರವಾಗಿಯೇ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಅವಕಾಶಕ್ಕಾಗಿ ಏನು ಬೇಕಾದರೂ ಮಾಡ್ತೀರಾ ಅಂತಾ ಫ್ಯಾನ್ಸ್, ನಟಿಗೆ ಸಾಮಾಜಿಕ ಜಾಲತಾಣದಲ್ಲಿ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.