DAKSHINA KANNADA
ಬಿಳಿನೆಲೆ ಸಂದೀಪ್ ಕೊಲೆ ಪ್ರಕರಣ ಕಾಂಗ್ರೇಸ್ ಮುಖಂಡ ಶಾಮೀಲಾಗಿದ್ದಾರೆ ಎನ್ನುವ ಬಿಜೆಪಿಗರು ಮಜ್ಜಾರು ಕ್ಷೇತ್ರಕ್ಕೆ ಬರಲಿ: ಸುಧೀರ್ ಕುಮಾರ್ ಶೆಟ್ಟಿ ಸವಾಲು
ಕಡಬ ಡಿಸೆಂಬರ್ 04: ಬಿಳಿನೆಲೆಯ ಸಂದೀಪ್ ಕೊಲೆ ಪ್ರಕರಣದಲ್ಲಿ ಕಾಂಗ್ರೇಸ್ ಮುಖಂಡರು ಶಾಮೀಲಾಗಿದ್ದಾರೆ ಎಂದು ಆರೋಪಿಸಿರುವ ಬಿಜೆಪಿಯವರು ಆರೋಪವನ್ನು ಸಾಬೀತು ಮಾಡಬೇಕು, ಇಲ್ಲವೇ ಕಾರಣಿಕ ಕ್ಷೇತ್ರ ಮಜ್ಜಾರು ಕ್ಷೇತ್ರಕ್ಕೆ ಬಂದು ಹೇಳಬೇಕು ಎಂದು ಕಡಬ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಸವಾಲು ಹಾಕಿದ್ದಾರೆ.
ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಾಂಗ್ರೇಸ್ ಮೇಲೆ ಆರೋಪ ಮಾಡುವವರು ಮಜ್ಜಾರು ಕ್ಷೇತ್ರಕ್ಕೆ ಬಂದು ದೈವ ಸನ್ನಿಧಿಯಲ್ಲಿ ಹೇಳಬೇಕು, ವಿನಾರಕಾರಣ ನನ್ನನ್ನು ಗುರಿಯಾಗಿಟ್ಟುಕೊಡು ಹೇಳಿಕೆ ನೀಡಿದವರ ವಿರುದ್ಧ ನಾನು ಅಲ್ಲಿ ಪ್ರಾರ್ಥನೆ ಮಾಡುತ್ತೇನೆ. ಕುಕ್ಕೇ ಸುಬ್ರಹ್ಮಣ್ಯ ಕ್ಷೇತ್ರದಲ್ಲೂ ಪ್ರಾರ್ಥನೆ ಸಲ್ಲಿಸುತ್ತೇನೆ, ಮತ್ತೊಂದೆಡೆ ಕಾನೂನು ಹೋರಾಟವನ್ನೂ ಮಾಡುತ್ತೇನೆ ಎಂದರು.
ಕೊಲೆ ಪ್ರಕರಣದಲ್ಲಿ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎನ್ನುವ ಆರೋಪ ಮಾಡಿದ್ದಾರೆ. ಇರಬಹುದು ನಾವು ಆ ವಿಚಾರದಲ್ಲಿ ಸಹಮತ ನೀಡಿ ಸಮಗ್ರ ತನಿಖೆಗೆ ಅಗ್ರಹಿಸುತ್ತಿದ್ದೇವೆ. ಆರೋಪಿಗೆ ಕಾಂಗ್ರೇಸ್ ಮುಖಂಡರೊಬ್ಬರು ಬೆಂಬಲ ನೀಡುತ್ತಿದ್ದಾರೆ ಎಂದು ಸುಳ್ಳು ಆರೋಪ ಮಾಡುತ್ತಿರುವ ಬಿಜೆಪಿ ಮುಖಂಡರನ್ನು ಬಂಧಿಸಬೇಕು ಎಂದು ಅಗ್ರಹಿಸಿದ ಸುಧೀರ್ ಶೆಟ್ಟಿ ಹತ್ಯೆಗೆ ಪೂರಕವಾದ ಕೆಲಸ ಮಾಡಿದವರನ್ನು ಕೂಡಾ ಬಂಧಿಸಬೇಕು ಎಂದರು.