Connect with us

    LATEST NEWS

    ಬಾಲಿವುಡ್ ನಟ ವಿವೇಕ್ ಓಬರಾಯ್ ಮನೆ ಮೇಲೆ ಸಿಸಿಬಿ ದಾಳಿ…!!

    ಮುಂಬೈ ಅಕ್ಟೋಬರ್ 15: ಸ್ಯಾಂಡಲ್ ವುಡ್ ಡ್ರಗ್ ಪ್ರಕರಣ ಈಗ ಬಾಲಿವುಡ್ ಅಂಗಳಕ್ಕೆ ಬಂದು ನಿಂತಿದ್ದು, ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರ ಮನೆಯ ಮೇಲೆ ಬೆಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ವಿವೇಕ್ ಅವರ ಸಂಬಂಧಿಯಾಗಿರುವ ಆದಿತ್ಯ ಅಳ್ವಾ ಬೆಂಗಳೂರು ಡ್ರಗ್ಸ್ ಪ್ರಕರಣದ ಆರೋಪಿ. ಆತನನ್ನು ಹುಡುಕಿಕೊಂಡು ಪೊಲೀಸರು ವಿವೇಕ್ ಅವರ ಮುಂಬೈ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ.


    ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಆದಿತ್ಯ ಆಳ್ವಾ ವಿರುದ್ಧ ಪ್ರಕರಣ ದಾಖಲಾದ ನಂತರ ತಲೆಮರೆಸಿಕೊಂಡಿದ್ದಾನೆ. ಇಂದು ಸಿಸಿಬಿ ನ್ಯಾಯಾಲಯದ ವಾರಂಟ್‌ನೊಂದಿಗೆ ವಿವೇಕ್ ಅವರ ಮನೆಯಲ್ಲಿ ಹುಡುಕಾಟ ನಡೆಸಿದೆ. ಸಿಸಿಬಿ ಹೊರಡಿಸಿದ ಹೇಳಿಕೆಯ ಪ್ರಕಾರ, ಕಾಟನ್‌ಪೇಟೆ ಡ್ರಗ್ಸ್ ಪ್ರಕರಣದಲ್ಲಿ ಆದಿತ್ಯ ಆಳ್ವಾ ಬೇಕಾಗಿದ್ದು ಆತ ತಲೆಮರೆಸಿಕೊಂಡಿದ್ದಾನೆ. ವಿವೇಕ್ ಒಬೆರಾಯ್ ಅವರ ಸಂಬಂಧಿಯಾಗಿರುವ ಆಳ್ವಾಗೆ ಆಶ್ರಯ ನೀಡೀದ್ದಾರೆಂಬ ಮಾಹಿತಿ ಇದ್ದು ಅದಕ್ಕಾಗಿ ನಾವು ಒಬೆರಾಯ್ ಅವರ ನಿವಾಸದ ಮೇಲೆ ದಾಳಿ ಮಾಡಲಾಗಿದೆ. ಇದಕ್ಕಾಗಿ ನ್ಯಾಯಾಲಯದಿಂದ ವಾರಂಟ್ ತೆಗೆದುಕೊಂಡು ಸಿಸಿಬಿ ತಂಡ ಮುಂಬೈನ ಅವರ ಮನೆಗೆ ತೆರಳಿದೆ.

    ಸಿಸಿಬಿ ತಂಡ ಈ ಮೊದಲು ಆದಿತ್ಯ ಮನೆಯ ಮೇಲೆ ಸಹ ದಾಳಿ ಮಾಡಿತ್ತು. ಹೆಬ್ಬಾಳದ ಸಮೀಪವಿರುವ ಆದಿತ್ಯ ಮನೆ ‘ಹೌಸ್ ಆಫ್ ಲೈವ್ಸ್ ಅನ್ನು ಶೋಧಿಸಲಾಗಿದೆ. ಈ ಆದಿತ್ಯ ಆಳ್ವಾ ಮಾಜಿ ಸಚಿವ ಜೀವರಾಜ್ ಅಳ್ವಾ ಅವರ ಪುತ್ರ. ಈತ ದೊಡ್ಡ ದೊಡ್ಡ ಪಾರ್ಟಿಗಳನ್ನು ನಡೆಸುತ್ತಿದ್ದನು ಎನ್ನಲಾಗಿದೆ. ಇವರ ಸಹೋದರಿ ಪ್ರಿಯಾಂಕಾ ಆಳ್ವಾ ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರನ್ನು ಮದುವೆಯಾಗಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply