Connect with us

    DAKSHINA KANNADA

    ದ.ಕ. ಎಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ ಮರಳುಗಾರಿಕೆ,ಅಧಿಕಾರಿಗಳಿಗಿಲ್ಲ ತಡೆಯುವ ಎದೆಗಾರಿಕೆ

    ದ.ಕ. ಎಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ ಮರಳುಗಾರಿಕೆ,ಅಧಿಕಾರಿಗಳಿಗಿಲ್ಲ ತಡೆಯುವ ಎದೆಗಾರಿಕೆ

    ಮಂಗಳೂರು,ಮಾರ್ಚ್ 24: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮರಳು ಮಾಫಿಯಾ ಅಟ್ಟಹಾಸ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ.

    ತಾವು ಮಾಡಿದ್ದೇ ನಿಯಮ, ಹೇಳಿದ್ದೇ ಕಾನೂನು ಎನ್ನುವ ರೀತಿಯಲ್ಲಿ ಈ ಮರಳುದಂಧೆಕೋರರು ವರ್ತಿಸುತ್ತಿದ್ದಾರೆ. ಮಂಗಳೂರು ಹೊರವಲಯದ ಕಣ್ಣೂರು ಎನ್ನುವ ಪ್ರದೇಶ ಮರಳು ದಂಧೆಕೋರರ ಅಡ್ಡೆಯಾಗಿ ಬದಲಾವಣೆಗೊಂಡಿದೆ.

    ಇಲ್ಲಿ ಅಕ್ರಮ ಮರಳುದಂಧೆ ನಡೆಸುವ ಕುಳಗಳು ತಮ್ಮ ಕೆಲಸಗಾರರಿಗಾಗಿ ಅಕ್ರಮ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದಾರೆ.

    ಈ ಹಿಂದೆಯೂ ಈ ರೀತಿಯ ಅಕ್ರಮ ಕಟ್ಟಡ ನಿರ್ಮಿಸಿದ್ದರ ವಿರುದ್ಧ ಆಗಿನ ಮಹಾನಗರ ಪಾಲಿಕೆ ಕಟ್ಟಡಗಳನ್ನು ನೆಲಸಮಗೊಳಿಸುವ ಮೂಲಕ ಕ್ರಮ ಕೈಗೊಂಡಿತ್ತು.

    ಆದರೆ ಇದೀಗ ಮತ್ತೆ ಅಕ್ರಮ ಕಟ್ಟಡಗಳು ಮೇಲೆ ಬರುತ್ತಿದೆ.

    ನೇತ್ರಾವತಿ ನದಿ ಪರಂಬೋಕು ಜಾಗವನ್ನು ಸಂಪೂರ್ಣ ನುಂಗಿ ನೀರು ಕುಡಿದಿರುವ ಈ ಕುಳಗಳು ಇದೀಗ ರಾಷ್ಟ್ರೀಯ ಹೆದ್ದಾರಿಯನ್ನೂ ತಮ್ಮದೇ ಆಸ್ತಿ ಎಂದು ತಿಳಿದುಕೊಂಡಿರುವ ಇವರು ಮರಳು ತುಂಬಿದ ಲಾರಿಗಳನ್ನು ಏಕಾಏಕಿ ಹೆದ್ದಾರಿಗೆ ನುಗ್ಗಿಸುತ್ತಿದ್ದಾರೆ.

    ಅಲ್ಲದೆ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ತಡೆ ಮಾಡಿ ತಮ್ಮ ಮರಳು ಲಾರಿಗಳು ಸಲೀಸಾಗಿ ಸಾಗುವಂತೆ ನೋಡಿಕೊಳ್ಳುತ್ತಿದ್ದಾರೆ. ಇದಲ್ಲದೆ ಕೆಲವು ಮರಳು ಲಾರಿಗಳು ಇಲ್ಲಿ ವಿರುದ್ಧ ದಿಕ್ಕಿನಲ್ಲೂ ಬರುತ್ತಿದೆ.

    ಸರಿ ದಿಕ್ಕಿನಲ್ಲಿ ಬರುವ ಇತರ ವಾಹನಗಳ ಪಾಲಿಗೆ ಯಮ ಸ್ವರೂಪಿಗಳೂ ಆಗುತ್ತಿದೆ.

    ಇವರ ಬಳಿ ಕೆಲಸ ಮಾಡಲು ಬರುವ ಕಾರ್ಮಿಕರು ಎಲ್ಲಿಯವರು ಎನ್ನುವ ಮಾಹಿತಿಯೂ ಇವರಲಿಲ್ಲ.

    ಬಂಗಾಳ ಸೇರಿದಂತೆ ಉತ್ತರ ಭಾರತದಿಂದ ಬರುತ್ತಿರುವ ಕಾರ್ಮಿಕರನ್ನು ಇಲ್ಲಿ ಜೀತದಾಳುಗಳ ಹಾಗೆ ದುಡಿಸಲಾಗುತ್ತಿದೆ.

    ರಾತ್ರಿ-ಹಗಲೆನ್ನದೆ ನೇತ್ರಾವತಿಯ ಒಡಲನ್ನು ಬಗೆಯುವ ಈ ಕುಳಗಳು ರಾಜಕೀಯ ಪಕ್ಷಗಳು ಮುಖಂಡರ ಜೊತೆಗೆ ಬಿಳಿ ಶರ್ಟು ಹಾಕಿ ಮಿಂಚುತ್ತಲೂ ಇರುತ್ತಾರೆ.

    ಈ ಕಾರಣಕ್ಕಾಗಿ ಯಾವ ಅಧಿಕಾರಿಯೂ ಇವರ ಅಕ್ರಮವನ್ನು ಪ್ರಶ್ನಿಸಲು ಮುಂದೆ ಬರುತ್ತಿಲ್ಲ.

    ಇತ್ತೀಚೆಗೆ ಅಕ್ರಮ ಮರಳುಗಾರಿಕೆಗೆ ತಡೆಯೊಡ್ಡಿದ ಎನ್ನುವ ಕಾರಣಕ್ಕಾಗಿಯೇ ಸಚಿವ ಯು.ಟಿ.ಖಾದರ್ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಯೊಬ್ಬರನ್ನು ಸರ್ಕೂಟ್ ಹೌಸ್ ಗೆ ಕರೆಸಿ ಬೆದರಿಕೆ ಹಾಕಿದ್ದಾರೆ ಎನ್ನುವ ಮಾಹಿತಿಯೂ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

    ಇದೇ ಕಾರಣಕ್ಕಾಗಿ ಜಿಲ್ಲಾಡಳಿತವೂ ಇವರ ಹತ್ತಿರವೂ ಸುಳಿಯದೆ, ಇವರ ಎಲ್ಲಾ ಅಕ್ರಮಗಳಿಗೆ ಅಭಯಹಸ್ತವನ್ನೂ ದಯಪಾಲಿಸಿದ ಎನ್ನುವ ಮಾತುಗಳೂ ಕೇಳಿ ಬರುತ್ತಿದೆ.

    ಒಂದೆಡೆ ನೇತ್ರಾವತಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೆ, ಇನ್ನೊಂದೆಡೆ ಪಲ್ಗುಣಿ ನದಿಯನ್ನೂ ಈ ಮರಳುಗಳ್ಳರು ಲೂಟಿ ಹೊಡೆಯುತ್ತಿದ್ದಾರೆ.

    ಜಿಲ್ಲೆಯಲ್ಲಿ ಇಷ್ಟೆಲ್ಲಾ ಅಕ್ರಮಗಳು ನಡೆಯುತ್ತಿದ್ದರೂ, ಪ್ರತಿಪಕ್ಷಗಳು ಮಾತ್ರ ಏನೂ ನಡೆದಿಲ್ಲ ಎನ್ನುವಂತೆ ವರ್ತಿಸುತ್ತಿರುವುದು ಇವರಿಗೂ ಈ ಅಕ್ರಮಗಳಲ್ಲಿ ಪಾಲಿದೆಯೇ ಎನ್ನುವ ಸಂಶಯವೂ ಮೂಡುತ್ತಿದೆ.

     

    ಅಕ್ರಮ ಮರಳುಗಾರಿಕೆಯ ವಿಡಿಯೋ…

    Share Information
    Advertisement
    Click to comment

    You must be logged in to post a comment Login

    Leave a Reply