Connect with us

BELTHANGADI

22 ದಿನಗಳ ನಂತರ ಸನತ್ ಶೆಟ್ಟಿ ಮೃತದೇಹ ಪತ್ತೆ

ಬೆಳ್ತಂಗಡಿ ಫೆಬ್ರವರಿ 16: ಬಂಗಾರಪಲ್ಕೆ ಜಲಪಾತದಲ್ಲಿ ಗುಡ್ಡ ಕುಸಿತದಿಂದ ನಾಪತ್ತೆಯಾಗಿದ್ದ ವಿಧ್ಯಾರ್ಥಿ ಸನತ್ ಶೆಟ್ಟಿ ಮೃತದೇಹ 22 ದಿನಗಳ ನಂತರ ಪತ್ತೆಯಾಗಿದೆ.


ಜನವರಿ 25 ರಂದು ಮಧ್ಯಾಹ್ನ 1.30ರ ಸುಮಾರಿಗೆ ಮಲವಂತಿಗೆ ಗ್ರಾಮದ ಬಂಗಾರಪಲ್ಕೆ ಬಡಮನೆ ಅಬ್ಬಿ ಜಲಪಾತ ವೀಕ್ಷಣೆಗೆ ತೆರಳಿದ್ದ ಸಂದರ್ಭ ಗುಡ್ಡ ಕುಸಿದು ಸನತ್ ಮಣ್ಣಿನಡಿ ಸಿಲುಕಿ ನಾಪತ್ತೆಯಾಗಿದ್ದರು, ಈ ಸಂದರ್ಭ ಉಳಿದವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು.


ನಂತರ ಯವಕನ ಪತ್ತೆಗಾಗಿ ಜಿಲ್ಲಾಡಳಿತ ಪೊಲೀಸ್ ಇಲಾಖೆ,‌ ಅಗ್ನಿಶಾಮಕ ಇಲಾಖೆ, ಕಂದಾಯ ಇಲಾಖೆ, ಸ್ಥಳೀಯ ಗ್ರಾ.ಪಂ, ಎನ್‌ಡಿಆರ್‌ಎಫ್ ತಂಡ ಸತತ ಪ್ರಯತ್ನ ನಡೆಸಿತ್ತು. ಈ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲು ಬೇಕಾದ ಯಂತ್ರಗಳನ್ನು ಬಳಸಲು ಸರಿಯಾದ ವಾತಾವರಣವಿಲ್ಲದ ಕಾರಣ ಹಲವು ಸಮಯದವರೆಗೂ ಮೃತ ದೇಹ ಪತ್ತೆಯಾಗಿರಲಿಲ್ಲ. ಮಂಗಳವಾರ ಕಲ್ಲು ಬಂಡೆಯಡಿ ಮೃತದೇಹ ಲಭ್ಯವಾಗಿದೆ. ಮೃತ ಸನತ್ ಶೆಟ್ಟಿ ಲಾಯಿಲಾ ಗ್ರಾಮದ ಕಾಶಿಬೆಟ್ಟು ಕೃಷ್ಣ ವಾಸುದೇವ ಶೆಟ್ಟಿ ಅವರ ಪುತ್ರ. ಉಜಿರೆ ಎಸ್‌ಡಿಎಂ ಕಾಲೇಜಿನ ದ್ವಿತೀಯ ಪದವಿ ವಿದ್ಯಾರ್ಥಿಯಾಗಿದ್ದರು

Share Information
Continue Reading
Advertisement
Click to comment

Leave a Reply

Your email address will not be published. Required fields are marked *