LATEST NEWS
ಧಾರ್ಮಿಕ ಕಟ್ಟುಪಾಡಿಗೆ ಬಿದ್ದು ,ರಂಗಿನ ಧುನಿಯಾಕ್ಕೆ ಗುಡ್ ಬೈ ಹೇಳಿದ ಸಾನಾ ಖಾನ್

ಧಾರ್ಮಿಕ ಕಟ್ಟುಪಾಡಿಗೆ ಬಿದ್ದು ,ರಂಗಿನ ಧುನಿಯಾಕ್ಕೆ ಗುಡ್ ಬೈ ಹೇಳಿದ ಸಾನಾ ಖಾನ್
ಮುಂಬೈ, ಅಕ್ಟೋಬರ್ 09: ಟೆಲಿವಿಷನ್ ನಟಿ, ಬಿಗ್ ಬಾಸ್ ಸ್ಪರ್ಥಿ ಸಾನಾ ಖಾನ್ ರಂಗಿನ ಧುನಿಯಾದಿಂದ ಹೊರ ಬರಲು ನಿರ್ಧರಿಸಿದ್ದಾರೆ.
ಅಚ್ಚರಿಯ ಬೆಳವಣಿಗೆಯಲ್ಲಿ ತನ್ನ ಇನ್ಸ್ಟಾಗ್ರಾಮ್ ನಲ್ಲಿ ತನ್ನ ಅಭಿಮಾನಿಗಳಿಗೆ ವಿಷಯವನ್ನು ಹಂಚಿಕೊಂಡಿದ್ದಾರೆ.

ಧಾರ್ಮಿಕ ವಿಚಾರದ ಹಿನ್ನಲೆಯಲ್ಲಿ ಈ ನಿರ್ಧಾರಕ್ಕೆ ಬಂದಿರುವುದಾಗಿಯೂ ಅವರು ತಿಳಿಸಿದ್ದಾರೆ.
ಝೈರಾ ವಾಸಿಂ ಬಳಿಕ ಇದೀಗ ಟೆಲಿವಿಷನ್ ರಂಗದಿಂದ ಹೊರ ನಡೆದ ಸಾನಾ ಖಾನ್ ಮುಂದಿನ ದಿನಗಳಲ್ಲಿ ಮಾನವಕುಲದ ಅಭಿವೃದ್ಧಿಯಲ್ಲಿ ತೊಡಗಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.
ರಂಗಿನ ಧುನಿಯಾದಲ್ಲಿ ಕಾಲಿಡುವ ಸಮಯದಲ್ಲಿ ಮೂಲಭೂತವಾದಿಗಳ ವಿರೋಧವನ್ನೂ ಸಾನಾ ಖಾನ್ ಎದುರಿಸಿದ್ದರು ಎನ್ನಲಾಗಿದೆ.
ಇದೀಗ ಈ ಎಲ್ಲಾ ಜಂಜಾಟಗಳಿಂದ ಹೊರಬರಲು ಈ ನಟಿ ನಿರ್ಧರಿಸಿದ್ದಾರೆ.