UDUPI
ಕಡಲ ಕಿನಾರೆಯಲ್ಲಿ ಸಮುದ್ರ ಪೂಜೆ
ಉಡುಪಿ ಅಗಸ್ಟ್ 3: ಪ್ರತೀ ವರ್ಷದಿಂತೆ ಈ ಬಾರಿಯೂ ನೂಲ ಹುಣ್ಣಿಮೆಯಂದು ಕರಾವಳಿಯಲ್ಲಿ ವಿವಿಧ ಕಡೆಗಳಲ್ಲಿ ಸಮುದ್ರ ಪೂಜೆ ನಡೆದಿದೆ. ಉಡುಪಿ ಜಿಲ್ಲೆಯ ವಿವಿದೆಡೆ ಮೀನುಗಾರರು ಸಮುದ್ರಪೂಜೆ ಸಹಿತವಾಗಿ ಕ್ಷೀರಾಭಿಷೇಕ ನಡೆಸಿದರು. ಮಲ್ಪೆ ಮೀನುಗಾರರ ಸಂಘ ದ ನೇತೃತ್ವದಲ್ಲಿ ಆಯೋಜಿಸಿದ್ದ ಸಮುದ್ರ ಪೂಜೆ ಯಲ್ಲಿ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭಾಗವಹಿಸಿದ್ದರು. ಕಾಪು, ಪೊಲಿಪು, ಕೈಪುಂಜಾಲು, ಮೂಳೂರು ಮೊಗವೀರ ಮಹಾಸಭಾಗಳ ನೇತೃತ್ವದಲ್ಲಿ ವಿವಿಧ ಭಜನಾ ಮಂದಿರಗಳು ಮತ್ತು ಪ್ರಾರ್ಥನಾ ಮಂದಿರಗಳ ಸಹಕಾರದೊಂದಿಗೆ ಸಮುದ್ರ ಪೂಜೆ ನೆರವೇರಿಸಲಾಯಿತು.
ಪ್ರತೀ ವರ್ಷ ನೂಲ ಹುಣ್ಣಿಮೆಯಂದು ಕರಾವಳಿಯಲ್ಲಿ ಸಮುದ್ರ ಪೂಜೆ ನಡೆಯುತ್ತಿದ್ದು ಆ ಮೂಲಕ ಮೀನುಗಾರರು ಹೇರಳ ಮತ್ಸ್ಯ ಸಂಪತ್ತು ದೊರಕಿಸುವಂತೆ ಮತ್ತು ಮೀನುಗಾರಿಕೆಯ ವೇಳೆ ಯಾವುದೇ ರೀತಿಯ ತೊಂದರೆಗಳು ಆಗದಿರಲೆಂಬ ಪ್ರಾರ್ಥನೆಯೊಂದಿಗೆ ಕ್ಷೀರಾಭಿಷೇಕ, ಸೀಯಾಳಾಭಿಷೇಕ ಸಹಿತ ಪೂಜೆ ನೆರವೇರಿಸುತ್ತಾರೆ.
ಕೊರೊನಾ ಲಾಕ್ ಡೌನ್ ನಿಂದಾಗಿ ಕಳೆದ ಮೀನುಗಾರಿಕಾ ಋುತುವಿನಲ್ಲಿ ಸರಿಯಾದ ಮೀನುಗಾರಿಕೆ ನಡೆಯದೇ ಸಂಕಷ್ಟಕ್ಕೀಡಾಗಿರುವ ಮೀನುಗಾರರು ಈ ಭಾರಿಯಾದರು ಯಾವುದೇ ತೊಂದರೆ ಇಲ್ಲದೆ ಮೀನುಗಾರಿಕೆಗೆ ನಡೆಯಲು ಸಮುದ್ರ ರಾಜನಲ್ಲಿ ಪ್ರಾರ್ಥಿಸಿದರು.