BELTHANGADI
ಅವಳಿ ಸಹೋದರಿಯರಿಗೆ ಮಾರ್ಕ್ಸ್ ನಲ್ಲೂ ಸೇಮ್ ಟು ಸೇಮ್

ಬೆಳ್ತಂಗಡಿ ಎಪ್ರಿಲ್ 22 : ಅವಳಿ ಸಹೋದರಿಯರಿಬ್ಬರು ಪಿಯುಸಿ ಪರೀಕ್ಷೆಯಲ್ಲೂ ಸಮಾನ ಅಂಕಗಳನ್ನು ಪಡೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಅವಳಿ ಸಹೋದರಿಯರು ಸ್ಪಂದನಾ ಹಾಗೂ ಸ್ಪರ್ಷಾ ವಾಣಿಜ್ಯ ವಿಭಾಗದಲ್ಲಿ ಇಬ್ಬರು ಕೂಡ 600 ರಲ್ಲಿ 594 ಸಮಾನ ಅಂಕ ಪಡೆದು ಅಚ್ಚರಿ ಮೂಡಿಸಿದ್ದಾರೆ. ಸ್ಪಂದನಾ ಹಾಗೂ ಸ್ಪರ್ಷಾ ನೆರಿಯ ಗ್ರಾಮದ ಉಮೇಶ್ ಗೌಡ ಪಿ.ಹೆಚ್ ಮತ್ತು ಗೀತಾ ದಂಪತಿಯ ಮಕ್ಕಳಾಗಿದ್ದು, ಪ್ರತಿಷ್ಟಿತ ಉಜಿರೆ ಎಸ್ ಡಿಎಂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
