LATEST NEWS
ಕರಾವಳಿಯಲ್ಲಿ ಇನ್ನು ಭಾನುವಾರ ಸಲೂನ್ ಗೆ ರಜೆ

ಕರಾವಳಿಯಲ್ಲಿ ಇನ್ನು ಭಾನುವಾರ ಸಲೂನ್ ಗೆ ರಜೆ
ಮಂಗಳೂರು ಜೂನ್ 1: ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಸಲೂನ್ ಗಳಿಗೆ ಮಂಗಳವಾರದ ಬದಲು ಭಾನುವಾರು ರಜೆ ಇರಲಿದೆ ಎಂದು ದಕ್ಷಿಣಕನ್ನಡ ಜಿಲ್ಲಾ ಸವಿತಾ ಸಮಾಜ ತಿಳಿಸಿದೆ.
ಕೊರೊನಾ ಮುಂಜಾಗೃತಾ ಕ್ರಮವಾಗಿ ಭಾನುವಾರ ಜನದಟ್ಟಣೆ ಹೆಚ್ಚಿರುತ್ತದೆ. ಅಲ್ಲದೆ ಈ ಸಂದರ್ಭ ಪರಸ್ಪರ ಅಂತರ ಕಾಯ್ದುಕೊಳ್ಳಬೇಕಿರುವ ಕಾರಣ ಆ ಸಂಡೆ ರಜೆ ಮಾಡುವುದು ಸೂಕ್ತ ಎಂದು ನಿರ್ಧರಿಸಿರುವುದಾಗಿ ದ.ಕ ಜಿಲ್ಲಾ ಸವಿತಾ ಸಮಾಜ ಪ್ರಕಟಣೆಯಲ್ಲಿ ತಿಳಿಸಿದೆ.

Continue Reading