DAKSHINA KANNADA
ಸದ್ದಿಲ್ಲದೆ ಶ್ರೀ ಕ್ಷೇತ್ರ ಕಟೀಲಿಗೆ ಬಂದ ಸಲಾರ್ ಸ್ಟಾರ್ ‘ಪ್ರಭಾಸ್’.!

ಮಂಗಳೂರು : ತೆಲುಗು ಚಿತ್ರರಂಗದ ಖ್ಯಾತ ಸಲಾರ್ ಖ್ಯಾತಿಯ ಸೂಪರ್ ಸ್ಟಾರ್ ಪ್ರಭಾಸ್ ಪುರಾಣ ಪ್ರಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದಿದ್ದಾರೆ.
ಸಲಾರ್ ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ನಟ ಪ್ರಭಾಸ್ ಮತ್ತು ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಜೊತೆಯಾಗಿ ಕಟೀಲಿಗೆ ಆಗಮಿಸಿದ್ದರು. ಕಟೀಲು ಕ್ಷೇತ್ರದ ಅರ್ಚಕ ಹರಿನಾರಾಯಣ ಅಸ್ರಣ್ಣ ದೇವಳ ವತಿಯಿಂದ ಶ್ರೀ ದುರ್ಗೆಯ ಫೋಟೊ ನೀಡಿ ಗೌರವಿಸಿದರು. ಸಲಾರ್ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಕಟೀಲು ದುರ್ಗೆಯ ಪರಮಭಕ್ತರಾಗಿದ್ದಾರೆ. ಆಗಿಂದಾಗ್ಗೆ ಕಟೀಲು ದೇವಸ್ಥಾನಕ್ಕೆ ಬರುತ್ತಿರುತ್ತಾರೆ ಆದ್ರೆ.ಪ್ರಭಾಸ್ ಇದೇ ಮೊದಲ ಬಾರಿಗೆ ಕಟೀಲಿಗೆ ಬಂದಿದ್ದಾರೆ.
ಅಂದ ಹಾಗೇ ಸಲಾರ್ ಸಿನಿಮಾ ಯಶಸ್ಸಿನ ಬಳಿಕ ನಟ ಪ್ರಭಾಸ್, ಹೊಸ ಸಿನಿಮಾ ಕಲ್ಕಿ 2898 ಎಡಿ ಚಿತ್ರದಿಂದಲೂ ಹೊಸ ಅಪ್‌ಡೇಟ್ ಸಿಕ್ಕಿದೆ. ಮೇ 9ರಂದು ಈ ಸಿನಿಮಾ ವಿಶ್ವದಾದ್ಯಂತ ಬಿಡುಗಡೆ ಆಗಲಿದ್ದು, ಅದರ ರಿಲೀಸ್ ದಿನಾಂಕವನ್ನು ಅಧಿಕೃತವಾಗಿ ಚಿತ್ರತಂಡ ಘೋಷಿಸಿದೆ. ಇದೀಗ ಇದೆಲ್ಲದರ ಮಧ್ಯೆ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಪ್ರಭಾಸ್ ಭೇಟಿ ಅಚ್ಚರಿ ತಂದಿದೆ.
