MANGALORE
ಪಶು ಸಖಿಯರಿಗಾಗಿ ಒಂದು ದಿನದ ಕಾರ್ಯಾಗಾರ

ಮಂಗಳೂರು : ಪಶುಪಾಲನಾ ಮತ್ತು ಪಶು ವೈಧ್ಯಕೀಯ ಸೇವಾ ಇಲಾಖೆ, ದಕ್ಷಿಣ ಕನ್ನಡ ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಪಶುಸಖಿಯರಿಗಾಗಿ ಒಂದು ದಿನದ ಕಾರ್ಯಗಾರ ಮಂಗಳೂರಿನ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು.
ಮಾನ್ಯ “ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಆಯುಕ್ತರಾದ” ಶ್ರೀಮತಿ ಶ್ರೀ ರೂಪಾ I.A.S.ಉದ್ಘಾಟನೆ ನೆರವೇರಿಸಿದರು. ಕಾರ್ಯಗಾರದಲ್ಲಿ ಪಶು ಪಾಲನಾ ಹಾಗೂ ಪಶು ವೈಧ್ಯಕೀಯ ಸೇವಾ ಇಲಾಖೆಯ ನಿರ್ದೇಶಕರಾದ ಡಾ. ಮಂಜುನಾಥ್ ಪಾಳೆಗಾರ್, ಡಾ.ಎಚ್.ಎಸ್. ಜಯಣ್ಣ, ಜಿಲ್ಲಾ ಪಂಚಾಯತ್ ನ ಕಾರ್ಯ ನಿರ್ವಾಹಣಾ ಅಧಿಕಾರಿ ಡಾ.ಆನಂಧ ಕೆ, ಭಾರತ್ ಆಗ್ರೋವೆಟ್ ಇಂಡಸ್ಟ್ರೀಸ್ ಪ್ರೈ.ಲಿ. ನ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಅರುಣ್ ಕುಮಾರ್ ರೈ , ದ.ಕ ಜಿಲದಲಾ ಪಂಚಾಯತ್ ನ ಯೋಜನಾ ನಿರ್ಧೇಶಕರಾದ ಕೆ.ಇ.ಜಯರಾಂ, ಪಶು ಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಡಾ. ಅರುಣ್ ಕುಮಾರ್ ಶೆಟ್ಟಿ, ಹಾಗೂ ಉಪ ನಿರ್ದೇಶಕರು ಪಾಲಿಕ್ಲಿನಿಕ್ ಪ.ಪಾ.ಇ ದ.ಕ.ಜಿಲ್ಲೆಯ ಡಾ.ಎ.ಬಿ.ತಮ್ಮಯ್ಯ ಉಪಸ್ಥಿತರಿದ್ದರು.

ಈ ಸಂಧರ್ಭದಲ್ಲಿ ಪಶು ಸಖಿಯರಿಗೆ ಸಾಂಕೇತಿಕವಾಗಿ ಸಮವಸ್ತ್ರ ನೀಡಲಾಯಿತು, ಸಮವಸ್ತ್ರ ಒದಗಿಸಿ ಕೊಟ್ಟ ಭಾರತ್ ಆಗ್ರೊವೆಟ್ ಇಂಡಸ್ಟ್ರೀಸ್ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕರಿಗೆ ಸನ್ಮಾನಿಸಲಾಯಿತು ಬಳಿಕ ತರಬೇತಿ ಪಡೆದ ಪಶು ಸಖಿಯರಿಂದ ತಮ್ಮ ತರಭೇತಿ ಬಗ್ಗೆ ಮಾತನಾಡಿದರು.