MANGALORE
ಸಫ್ವಾನ್ ಅಪಹರಣ,ಕೊಲೆ : ಆರೋಪಿಗಳ ಬಂಧನಕ್ಕೆ DYFI ಗಡುವು

ಸಫ್ವಾನ್ ಅಪಹರಣ,ಕೊಲೆ : ಆರೋಪಿಗಳ ಬಂಧನಕ್ಕೆ DYFI ಗಡುವು
ಮಂಗಳೂರು, ಡಿಸೆಂಬರ್ 01 : ಸಫ್ವಾನ್ ಅಪಹರಣ, ಕೊಲೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು,
ಊರಿನ ನೆಮ್ಮದಿಗೆ ಭಂಗ ಉಂಟು ಮಾಡುತ್ತಿರುವ ಕ್ರಿಮಿನಲ್ ವ್ಯಕ್ತಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಡಿವೈಎಫ್ಐ ನೇತ್ರತ್ವದಲ್ಲಿಂದು ಪೋಲಿಸ್ ಇಲಾಖೆಗೆ ಸುರತ್ಕಲ್ ನಾಗರಿಕರು ಮನವಿ ಅರ್ಪಿಸಿದರು.

ಗಾಂಜಾ ಸಹಿತ ಮಾದಕ ಪದಾರ್ಥಗಳ ಮಾರಾಟ ಜಾಲವನ್ನು ಬುಡ ಸಮೇತ ಕಿತ್ತು ಹಾಕಬೇಕು, ಕುಖ್ಯಾತ ಕ್ರಿಮಿನಲ್ ಗಳಿಗೆ ಮನೆ ಬಾಡಿಗೆ ನೀಡಬಾರದು.
ಕ್ರಮಿನಲ್ ಗಳಿಗೆ ಠಾಣಾ ವ್ಯಾಪ್ತಿಯಲ್ಲಿ ವಾಸ ಹೂಡಲು ಅವಕಾಶ ಸಿಗದಂತೆ ಎಚ್ಚರಿಕೆ ವಹಿಸಬೇಕು ಎಂದು ಕಾಟಿಪಳ್ಳ, ಕೃಷ್ಣಾಪುರ, ಚೊಕ್ಕಬೆಟ್ಟು ಗ್ರಾಮಗಳ ನಾಗರಿಕರ ಪರವಾಗಿ ಸುರತ್ಕಲ್ ಠಾಣೆಯಲ್ಲಿ ಮನವಿ ಸಲ್ಲಿಸಲಾಯಿತು.

ಕೊಲೆಯಾದ ಸಫ್ವಾನ್
ಮೂರು ಗ್ರಾಮಗಳ ಹಲವಾರು ಸಂಘ ಸಂಸ್ಥೆಗಳನ್ನು ಪ್ರತಿನಿಧಿಸಿ ನೂರಕ್ಕೂ ಹೆಚ್ಚು ಜನ ಮನವಿ ಸಲ್ಲಿಸಲು ಜೊತೆಗೂಡಿದ್ದರು.
ಪಣಂಬೂರು ಉಪ ವಿಭಾಗದ ಎ ಸಿ ಪಿ ರಾಜೇಂದ್ರ ಕುಮಾರ್ ಮನವಿ ಸ್ವೀಕರಿಸಿದರು. ಠಾಣಾಧಿಕಾರಿ ಚೆಲುವರಾಜು ಉಪಸ್ಥಿತರಿದ್ದರು.
dyfi ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ನೇತೃತ್ವದ ನಿಯೋಗದಲ್ಲಿ ಸ್ಥಳೀಯ ಮಹಾ ನಗರ ಪಾಲಿಕೆ ಸದಸ್ಯರಾದ ಪ್ರತಿಭಾ ಕುಳಾಯಿ, ಅಯಾಜ್, ಮಾಜಿ ಮೇಯರ್ ಗುಲ್ಜಾರ್ ಭಾನು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರಾದ ಬಿ ಕೆ ಇಮ್ತಿಯಾಜ್, ಮುಸ್ಬಾ ಕೃಷ್ಣಾಪುರ, ಶ್ರೀನಾಥ್ ಕುಲಾಲ್, ರಾಜೇಶ್ ಪೂಜಾರಿ ಕುಳಾಯಿ, ಅಶ್ರಫ್ ಸಫಾ, ಸಿದ್ದೀಕ್ ನ್ಯೂ ಫ್ರೆಂಡ್ಸ್, ಇಬ್ರಾಹಿಂ ಕೃಷ್ಣಾಪುರ, ಅಬೂಸಾಲಿ ಕೃಷ್ಣಾಪುರ, ಶರೀಫ್ ಕುಳಾಯಿ, ಅಜರ್ ಚೊಕ್ಕಬೆಟ್ಟು, ಮೊಹ್ಶಿನ್ ಕಾಟಿಪಳ್ಳ, ಬಶೀರ್ ಕೃಷ್ಣಾಪುರ, ಫೈಜಲ್ ಕೃಷ್ಣಾಪುರ, ಅಜ್ಮಲ್ ಕಾನ ಸಹಿತ ಹಲವು ಪ್ರಮುಖರು ಭಾಗವಹಿಸಿದ್ದರು.