LATEST NEWS
ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ ಶ್ರೀನಿವಾಸ್ ಕಾಲೇಜ್ ವಿರುದ್ಧ ಕ್ರಮಕ್ಕೆ ಡಿವೈಎಫ್ಐ ಒತ್ತಾಯ
ಮಂಗಳೂರು ಜನವರಿ 25 : ಅಯೋಧ್ಯೆಯಲ್ಲಿ ರಾಮಮಂದಿರ ಉದ್ಟಾಟನಾ ದಿನದಂದು ವಲಚ್ಚಿಲ್‌ನಲ್ಲಿರುವ ಶ್ರೀನಿವಾಸ್ ಕಾಲೇಜಿನಲ್ಲಿ ಆವರಣದಲ್ಲಿರುವ ದೇಶದ ರಾಷ್ಟ್ರ ಧ್ವಜವನ್ನು ಹಾರಿಸಲು ಮೀಸಲಿಟ್ಟ ರಾಷ್ಟ್ರ ಲಾಂಛನವರುವ ಧ್ವಜಸ್ತಂಭದಲ್ಲಿ ಕೇಸರಿ ಬಾವುಟವನ್ನು ಹಾರಿಸಿರುವುದರ ವಿರುದ್ದ ಇದೀಗ ಡಿವೈಎಫ್ಐ ದೂರು ನೀಡಿದೆ.
ಕೆಲ ದೇಶ ವಿರೋಧಿ ಕಿಡಿಗೇಡಿಗಳು ಕಾಲೇಜಿನ ಆವರಣದಲ್ಲಿರುವ ದೇಶದ ರಾಷ್ಟ್ರ ಧ್ವಜವನ್ನು ಹಾರಿಸಲು ಮೀಸಲಿಟ್ಟ ರಾಷ್ಟ್ರ ಲಾಂಛನವರುವ ಧ್ವಜಸ್ತಂಭದಲ್ಲಿ ಒಂದು ಮತಕ್ಕೆ ಸೀಮಿತವಾಗಿರುವ ಕೇಸರಿ ಬಾವುಟವನ್ನು ಹಾರಿಸಿರುತ್ತಾರೆ. ರಾಷ್ಟ್ರ ಲಾಂಛನ ಮತ್ತು ರಾಷ್ಟ್ರ ಧ್ವಜಕ್ಕೆ ಗೌರವ ನೀಡುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ ಆದರೆ ಅದೇ ರಾಷ್ಟ್ರ ಲಾಂಛನವಿರುವ ಧ್ವಜ ಸ್ಥಂಭದಲ್ಲಿ ಕೇಸರಿ ಬಾವುಟ ಹಾರಿಸಿರುವುದು ದೇಶ ವಿರೋಧಿ ಕೃತ್ಯವಾಗಿರುತ್ತದೆ.
ಆದ್ದರಿಂದ ರಾಷ್ಟ್ರ ಧ್ವಜ ಹಾರಿಸಲು ಸೀಮಿತವಾಗಿರುವ ರಾಷ್ಟ್ರ ಲಾಂಛನವಿರುವ ಧ್ವಜ ಸ್ತಂಭ ರಲ್ಲಿ ಕೇಸರಿ ಧ್ವಜ ಹಾರಿಸಿ ದೇಶ ವಿರೋಧಿ ಕೃತ್ಯ ಎಸಗಲು ಕಿಡಿಗೇಡಿಗಳಿಗೆ ಪ್ರೇರಣೆ ನೀಡಿದ ಶ್ರೀನಿವಾಸ್ ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದು, ಸಹಬಾಳ್ವೆಯ ಬಗ್ಗೆ ಜಾಗೃತಿ ಮೂಡಿಸಬೇಕಿದ್ದ ಕಾಲೇಜಿನಲ್ಲಿ ಧರ್ಮಾಂಧತೆ, ಮತೀಯತೆಗೆ ಬೆಂಬಲ ಕೊಡುತ್ತಿರುವ ಶಿಕ್ಷಣ ಸಂಸ್ಥೆಗಳ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕಾಗಿ ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿಕೆ ಇಮ್ತಿಯಾಝ್ ಜಿಲ್ಲಾಧ್ಯಕ್ಷರು ಮತ್ತು ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.