National
ತಮ್ಮ ವಿರುದ್ಧ ಲಂಚದ ಆರೋಪ ಹೊರಿಸಿದ ಶಾಸಕನಿಗೆ ಒಂದು ರೂಪಾಯಿ ಮಾನನಷ್ಟ ನೋಟೀಸ್ ನೀಡಿದ ಸಚಿನ್ ಪೈಲಟ್
ಜೈಪುರ,ಜುಲೈ 22: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ವಿರುದ್ಧ ಅಸಮಾಧಾನಗೊಂಡು ಸರಕಾರದಿಂದ ಹೊರ ಬಂದಿರುವ ಸಚಿನ್ ಪೈಲಟ್ ವಿರುದ್ಧ ಇದೀಗ ಕಾಂಗ್ರೇಸ್ ಹೈ ಕಮಾಂಡ್ ಗರಂ ಆಗಿದೆ. ಸಚಿನ್ ಪೈಲಟ್ ವಿರುದ್ಧ ಸಾರ್ವಜನಿಕವಾಗಿ ಹೇಳಿಕೆ ನೀಡುವ ಮೂಲಕ ಸಚಿನ್ ಪೈಲಟ್ ಮೇಲೆ ಹಗೆ ಸಾಧಿಸಲು ಆರಂಭಿಸಿದೆ.
ಸ್ವತಹ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ಸಚಿನ್ ಒರ್ವ ಕೆಲಸಕ್ಕೆ ಬಾರದ ವ್ಯಕ್ತಿ ಎನ್ನುವ ರೀತಿಯ ಹೇಳಿಕೆಗಳನ್ನು ಮಾಧ್ಯಮಗಳ ಮುಂದೆ ನೀಡಿದ್ದಾರೆ. ಈ ನಡುವೆ ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಸಚಿನ್ ಪೈಲಟ್ ತನಗೆ ಅಡ್ಡ ಮತದಾನ ಹಾಕಲು ಲಂಚದ ಅಮಿಷ ಒಡ್ಡಿದಾರೆ ಎಂದು ರಾಜಸ್ಥಾನ ಕಾಂಗ್ರೇಸ್ ಶಾಸಕ ಗಿರಿರಾಜ್ ಸಿಂಗ್ ಆರೋಪಿಸಿದ್ದರು. ಈ ಬಗ್ಗೆ ಮಾಧ್ಯಮಗಳ ಮುಂದೆಯೂ ಅವರು ಮಾಹಿತಿ ನೀಡಿದ್ದರು.
ಈ ಸಂಬಂಧ ಸಚಿನ್ ಪೈಲಟ್ ಇದೀಗ ಶಾಸಕ ಗಿರಿರಾಜ್ ಸಿಂಗ್ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಈ ಸಂಬಂಧ ಶಾಸಕನಿಗೆ ತಮ್ಮ ವಕೀಲರ ಮೂಲಕ ಲೀಗಲ್ ನೋಟೀಸ್ ಜಾರಿ ಮಾಡಿದ್ದಾರೆ. ಒಂದು ರೂಪಾಯಿಯ ಮಾನನಷ್ಟದ ನೋಟೀಸ್ ಜೊತೆಗೆ ಶಾಸಕ ಗಿರಿರಾಜ್ ಸಿಂಗ್ ತನ್ನ ಆರೋಪಕ್ಕೆ ಮಾಧ್ಯಮಗಳ ಮುಂದೆ ಕ್ಷಮೆ ಕೋರಬೇಕು. ತನ್ನ ವಿರುದ್ಧ ಸುಳ್ಳು ಹಾಗೂ ನಿಷ್ಟ್ರಯೋಜಕ ಆರೋಪ ಹೊರಿಸಿದಕ್ಕೆ ಬರವಣಿಗೆಯ ಮೂಲಕ ಕ್ಷಮೆಯನ್ನು ಒಂದು ವಾರದ ಒಳಗೆ ಯಾಚಿಸಬೇಕೆಂದು ಸಚಿನ್ ಪೈಲಟ್ ತನ್ನ ನೋಟೀಸ್ ನಲ್ಲಿ ಒತ್ತಾಯಿಸಿದ್ದಾರೆ. ಇಲ್ಲದೇ ಹೋದಲ್ಲಿ ಕಾನೂನು ಸಮರ ಎದುರಿಸುವಂತೆಯೂ ಅವರು ಎಚ್ಚರಿಸಿದ್ದಾರೆ.