DAKSHINA KANNADA
ಸುರತ್ಕಲ್ – ಶಬರಿಮಲೆ ಹದಿನೆಂಟು ಮೆಟ್ಟಿಲು ಹತ್ತುವ ವೇಳೆ ಹೃದಯಾಘಾತದಿಂದ ಸಾವು

ಸುರತ್ಕಲ್ ಮೇ 19 : ಮಗನ ಹೆಸರಲ್ಲಿ ಹೇಳಿಕೊಂಡಿದ್ದ ಹರಕೆ ತೀರಿಸಲು ಶಬರಿಮಲೆಗೆ ತೆರಳಿದ್ದ ಕಾಟಿಪಳ್ಳ ನಿವಾಸಿ ಸಂದೀಪ್ ಶೆಟ್ಟಿ (37) ಅವರು ಹೃದಯಾಘಾತದಿಂದ ಶನಿವಾರ ನಿಧನರಾಗಿದ್ದಾರೆ.
ಶುಕ್ರವಾರ ಅವರ 10 ವರ್ಷದ ಮಗನ ಹರಕೆಯ ಸಲುವಾಗಿ ಮಗನ ಜತೆ ಶಬರಿಮಲೆಗೆ ತಂಡದೊಂದಿಗೆ ಹೊರಟಿದ್ದು, ಅಯ್ಯಪ್ಪ ಸನ್ನಿಧಾನದ 18 ಮೆಟ್ಟಿಲು ಬಳಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಕಾಟಿಪಳ್ಳ ನಿತ್ಯಾನಂದ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿಯಾಗಿ, ಕೇಸರಿ ಯುವಕ ಮಂಡಲದ ಪದಾಧಿಕಾರಿಯಾಗಿದ್ದರು. ನಿತ್ಯಾನಂದ ಕೆಟರರ್ಸ್ ಅನ್ನು ನಡೆಸುತ್ತಿದ್ದರು. ಅವರಿಗೆ ತಂದೆ, ತಾಯಿ, ಪತ್ನಿ, ಪುತ್ರ, ಪುತ್ರಿ ಇದ್ದಾರೆ.
