LATEST NEWS
ಸ್ನಾನದ ವೇಳೆ ಬಾತ್‍ಟಬ್ ಗೆ ಬಿದ್ದ ಐ ಪೋನ್.. ಕರೆಂಟ್ ಶಾಕ್ ಗೆ ಯುವತಿ ಸಾವು
ಮಾಸ್ಕೋ: ಬಾತ್ ಟಬ್ ನಲ್ಲಿ ಸ್ನಾನ ಮಾಡುತ್ತಿರುವ ಸಂದರ್ಭ ಚಾರ್ಜ್ ಗೆ ಇಟ್ಟಿದ್ದ ಐ ಪೋನ್ ಬಾತ್ ಟಬ್ ನಲ್ಲಿ ಬಿದ್ದಿದ್ದರಿಂದ ಕರೆಂಟ್ ಶಾಕ್ ಹೊಡೆದು 24 ವರ್ಷದ ಯುವತಿ ಸಾವನ್ನಪ್ಪಿರುವ ಘಟನೆ ರಷ್ಯಾದ ಅರ್ಖಾಂಗೆಲ್ಕಸ್ ನಗರದಲ್ಲಿ ನಡೆದಿದೆ.
ಓಲೆಸ್ಯಾ ಸೆಮೆನೋವಾ ಮೃತ ಯುವತಿಯಾಗಿದ್ದು, ಈಕೆ ಅಲೆಸ್ಯಾ ಅರ್ಖಾಂಗೆಲ್ಕಸ್ ನಗರದ ಬಟ್ಟೆ ಮಳಿಗೆಯಲ್ಲಿ ಕೆಲಸ ಮಾಡಿಕೊಂಡು ಗೆಳತಿ ಜೊತೆ ವಾಸವಾಗಿದ್ದಳು. ಸ್ನಾನಕ್ಕೂ ಮುನ್ನ ತನ್ನ ಐ ಫೋನ್ -8 ಬಾತ್ ರೂಮ್ ನಲ್ಲಿ ಚಾರ್ಜಿಂಗ್ ಹಾಕಿದ್ದರು. ಚಾರ್ಜಿಂಗ್ ಹಾಕಿದ್ದ ಮೊಬೈಲ್ ವೈಯರ್ ನಿಂದ ಕಳಚಿ ಸೀದಾ ಬಾತ್‍ಟಬ್ ನೊಳಗೆ ಬಿದ್ದಿದೆ. ಈ ಸಂದರ್ಭ ಮೊಬೈಲ್ ನಿಂದ ಹರಿದ ವಿದ್ಯುತ್ ನಿಂದ ಓಲೆಸ್ಯಾ ಮೃತಪಟ್ಟಿದ್ದಾಳೆ. ಅಲೆಸ್ಯಾಳ ಮೃತದೇಹವನ್ನ ಮೊದಲು ಆಕೆಯ ಗೆಳತಿ ಡಾರಿಯಾ ನೋಡಿ ಎಮೆರ್ಜೆನ್ಸಿ ನಂಬರ್ ಗೆ ಕರೆ ಮಾಡಿ ಸಹಾಯ ಕೇಳಿದ್ದಾಳೆ.
ಸ್ಥಳಕ್ಕಾಗಮಿಸಿದ ವೈದ್ಯರು ಅಲೆಸ್ಯಾ ಮೃತಪಟ್ಟಿರೋದನ್ನ ಖಚಿತ ಪಡಿಸಿದ್ದಾರೆ. ಅಲೆಸ್ಯಾ ಮೃತದೇಹ ಹಳದಿ ಬಣ್ಣಕಕ್ಕೆ ತಿರುಗಿತ್ತು. ಆಕೆಯ ನಾಡಿ ಬಡಿತ ಸಹ ನಿಂತಿತ್ತು ಎಂದು ಡಾರಿಯಾ ಹೇಳಿದ್ದಾಳೆ.
ಅಲೆಸ್ಯಾ ಸಾವಿನ ಬಳಿಕ ಪೊಲೀಸರು ಸಾರ್ವಜನಿಕ ಪ್ರಕಟನೆ ಹೊರಡಿಸಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಮೊಬೈಲ್ ನೀರಿನಲ್ಲಿ ಬಂದ್ರೆ ಅದು ಹಾಳಾಗುತ್ತೆ ಎಂದು ನಿಮಗೆ ತಿಳಿದಿರುತ್ತೆ. ಕೆಲ ಮೊಬೈಲ್ ಗಳು ನೆಟ್‍ವರ್ಕ್ ಜೊತೆ ಸಂಪರ್ಕದಲ್ಲಿದ್ದ ವೇಳೆ ನೀರಿನಲ್ಲಿ ಬಿದ್ದರೆ ವಿದ್ಯುತ್ ಪ್ರವಹಿಸುತ್ತದೆ. ಹಾಗಾಗಿ ಸಣ್ಣ ತಪ್ಪುಗಳಿಂದ ಜೀವವೇ ಹೋಗುತ್ತದೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದೆ.