LATEST NEWS
ಉಕ್ರೇನ್ ಸೇನೆ ಶಸ್ತ್ರ ಕೆಳಗಿಳಿಸಿದರೆ ಮಾತುಕತೆಗೆ ಸಿದ್ದ ಎಂದ ರಷ್ಯಾ..!!
ರಷ್ಯಾ : ಉಕ್ರೇನ್ ಮತ್ತು ರಷ್ಯಾ ಯುದ್ದ ಭೀಕರ ಹಂತಕ್ಕೆ ತಲುಪಿರುವ ನಡುವೆ ಇದೀಗ ರಷ್ಯಾ ಉಕ್ರೇನ್ ಜೊತೆ ಮಾತುಕತೆಗೆ ಮುಂದಾಗಿರುವುದು ಆಶ್ಚರ್ಯ ತರುವಂತೆ ಮಾಡಿದೆ.
ರಷ್ಯಾದ ವಿದೇಶಾಂಗ ಸಚಿವ ಲಾವ್‌ರೊವ್, ‘ಉದ್ವಿಗ್ನತೆ ಶಮನಗೊಳಿಸಲು ಮಾತುಕತೆಗೆ ಸಿದ್ಧ ಎಂದು ಹೇಳುತ್ತಿರುವ ಉಕ್ರೇನ್ ಅಧ್ಯಕ್ಷರ ಮಾತುಗಳೆಲ್ಲವೂ ಸುಳ್ಳು. ಉಕ್ರೇನ್ ಸೇನೆ ಶಸ್ತ್ರ ಕೆಳಗಿಳಿಸಿದರೆ ಮಾತುಕತೆಗೆ ರಷ್ಯಾ ಸಿದ್ಧವಿದೆ ಎಂದು ವಿದೇಶಾಂಗ ಸಚಿವ ಸೆರ್ಗೈ ಲಾವ್‌ರೊವ್ ತಿಳಿಸಿದರು.
ಉಕ್ರೇನ್‌ನಲ್ಲಿ ಸದ್ಯ ಇರುವ ಸರ್ಕಾರವನ್ನು ಪ್ರಜಾಸತ್ತಾತ್ಮಕ ಎಂದು ನಾವು ಒಪ್ಪಿಕೊಳ್ಳುವ ಸಾಧ್ಯತೆಗಳು ಇಲ್ಲ. ನಾವು ಉಕ್ರೇನ್ ಅನ್ನು ಆಕ್ರಮಿಸಿಕೊಳ್ಳಲು ಪ್ರಯತ್ನಿಸುತ್ತಿಲ್ಲ. ಉಕ್ರೇನ್ ಅನ್ನು ದಬ್ಬಾಳಿಕೆಯಿಂದ ಮುಕ್ತಗೊಳಿಸಲು ಬಯಸುತ್ತೇವೆ.
ಉಕ್ರೇನ್‌ನ ನಾಗರಿಕರನ್ನು ಸ್ವತಂತ್ರಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದೂ ಅವರು ಹೇಳಿದ್ದಾರೆ. ಉಕ್ರೇನ್ ರಾಜಧಾನಿ ಕೀವ್ ಮೇಲೆ ಕ್ಷಿಪಣಿ ದಾಳಿ ನಡೆಸಿಲ್ಲ ಎಂದು ರಷ್ಯಾ ಇದೇ ವೇಳೆ ಸ್ಪಷ್ಟಪಡಿಸಿದೆ.