LATEST NEWS
ಗಾಳಿ ಸುದ್ದಿಗೆ ನಲುಗಿದ ಶಿರಸಿ ಮತ್ತೆ ಬಂದ್

ಗಾಳಿ ಸುದ್ದಿಗೆ ನಲುಗಿದ ಶಿರಸಿ ಮತ್ತೆ ಬಂದ್
ಕಾರವಾರ ಡಿಸೆಂಬರ್ 13: ಸಾಮಾನ್ಯ ಸ್ಥಿತಿಗೆ ಮರಳಿದ್ದ ಶಿರಸಿ ಮತ್ತೆ ಬಂದ್ ಆಗಿದೆ. ಸಂಜೆ ಆಗುತ್ತಿದ್ದಂತೆ ನಗರದಲ್ಲಿ ಹರಡಿದ ಗಾಳಿ ಸುದ್ದಿಗೆ ಬೆಚ್ಚಿ ಬಿದ್ದ ಶಿರಸಿ ಜನರು ಏಕಾಏಕಿ ಸಿರಸಿ ನಗರವನ್ನು ಖಾಲಿ ಮಾಡಿದ್ದಾರೆ. ಮುಂಜಾನೆಯಿಂದ ವ್ಯಾಪಾರ ವಹಿವಾಟಿನಿಂದ ಸಹಜ ಸ್ಥಿತಿಗೆ ಮರಳಿದ್ದ ಶಿರಸಿಯಲ್ಲಿ ಸ್ಮಶಾನ ಮೌನ ಆವರಿಸಿದೆ. ಏಕಾ ಏಕಿ ಜನರು ಮನೆ ಸೇರಿಕೊಂಡಿದ್ದಾರೆ.
ನಿನ್ನೆ ರಣರಂಗವಾಗಿ ಪರಿಣಮಿಸಿದ್ದ ಶಿರಸಿ ಇಂದು ಮುಂಜಾನೆಯಿಂದಲೇ ಸಹಜ ಸ್ಥಿತಿಗೆ ಮರಳಿತ್ತು. ಮುಂಜಾನೆಯಿಂದಲೇ ನಗರದೆಲ್ಲಡೆ ವ್ಯಾಪಾರ ವಹಿವಾಟು ಭರ್ಜರಿಯಾಗಿಯೇ ನಡೆಯಿತು. ಅಡಿಕೆ ಮಂಡಿಯಲ್ಲಿ ಖರೀದಿ ಮತ್ತು ಮಾರಾಟ ನಡೆದು ಮಾರುಕಟ್ಟೆಯಲ್ಲೂ ಜನರ ಓಡಾಟ ಸಾಮಾನ್ಯವಾಗಿತ್ತು.

ಆದರೆ ಸಂಜೆ ಆಗುತ್ತಿದ್ದಂತೆ ಇಡೀ ಶಿರಸಿ ನಗರ ಖಾಲಿಯಾಗಿದೆ. ಇದಕ್ಕೆ ಕಾರಣವಾಗಿದ್ದು ಒಂದು ಗಾಳಿ ಸುದ್ದಿ. ಅನ್ಯ ಕೋಮಿನ ಯುವಕರು ನಗರದಲ್ಲಿ ದಾಂಧಲೆ ನಡೆಸಲು ಅಣಿಯಾಗುತ್ತಿದ್ದಾರೆ ಎನ್ನುವ ಗಾಳಿ ಸುದ್ದಿ ಇಡೀ ಶಿರಸಿಯನ್ನೆ ಸ್ತಬ್ದವಾಗಿಸಿದೆ. ನಗರದಲ್ಲಿ ವಾಹನ ಓಡಾಟ ವಿರಳವಾಗಿದ್ದು ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಡೆಸಲಾಗಿದ್ದು ಈವರೆಗೆ ಅಹಿತಕರ ಘಟನೆ ನಡೆದಿರುವ ವರದಿಯಾಗಿಲ್ಲ.