ಕಾಂತಾರ ನನಗೆ ತುಂಬಾ ವಿಶೇಷವಾದ ಚಿತ್ರ, ಇದು ನನ್ನ ಜೀವನವನ್ನು ಹಲವು ರೀತಿಯಲ್ಲಿ ಬದಲಾಯಿಸಿದ ಚಿತ್ರ ಎಂದು ನಟಿ ರುಕ್ಮಿಣಿ ವಸಂತ್ ಹೇಳಿದ್ದಾರೆ. ʻಕಾಂತಾರ: ಚಾಪ್ಟರ್ 1’ ಸಿನಿಮಾದ ಅಮೋಘ ಅಭಿನಯಕ್ಕಾಗಿ ಪ್ರತಿಷ್ಠಿತ INCA 2026ರ ಸಾಲಿನ ಶ್ರೇಷ್ಠ ನಟಿ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದ್ದಾರೆ.

ಈ ವೇಳೆ ಮಾತನಾಡಿದ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರುಕ್ಮಿಣಿ ವಸಂತ್, “ಕಾಂತಾರ ನನಗೆ ತುಂಬಾ ವಿಶೇಷವಾದ ಚಿತ್ರ, ಇದು ನನ್ನ ಜೀವನವನ್ನು ಹಲವು ರೀತಿಯಲ್ಲಿ ಬದಲಾಯಿಸಿದ ಚಿತ್ರ. ಇಡೀ ತಂಡಕ್ಕೆ ನನ್ನ ಕೃತಜ್ಞತೆಗಳು ಮಾತ್ರ ಉಳಿದಿವೆ, ಆದ್ದರಿಂದ ಇಂದು ಇಲ್ಲಿರುವ ರಿಷಬ್ ಸರ್, ಪ್ರಗತಿ ಮತ್ತು ನಮ್ಮ ಇಡೀ ತಂಡ, ನಮ್ಮ ನಿರ್ಮಾಪಕರು, ಹೊಂಬಾಳೆ, ನಿಮ್ಮೆಲ್ಲರ ಜೊತೆ ಕೆಲಸ ಮಾಡಿರುವುದು ಸಂತೋಷ” ಎಂದಿದ್ದಾರೆ.
ಭಾರತೀಯ ರಾಷ್ಟ್ರೀಯ ಸಿನಿ ಅಕಾಡೆಮಿಯು ಇತ್ತೀಚೆಗೆ ಘೋಷಿಸಿದ ಪ್ರಶಸ್ತಿಗಳಲ್ಲಿ ಕನ್ನಡ ವಿಭಾಗದಲ್ಲಿ ʻಕಾಂತಾರ: ಚಾಪ್ಟರ್ 1’ ಸಿನಿಮಾ ಅಭೂತಪೂರ್ವ ಯಶಸ್ಸು ಕಂಡಿದೆ. ಈ ಸಿನಿಮಾಗಾಗಿ ರುಕ್ಮಿಣಿ ವಸಂತ್ ಅವರು ʻಅತ್ಯುತ್ತಮ ನಟಿʼ ಪ್ರಶಸ್ತಿಯನ್ನ ಸ್ವೀಕರಿಸಿದ್ದಾರೆ. ಸಮಾರಂಭದಲ್ಲಿ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಮತ್ತು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗಳು ಸೇರಿದಂತೆ ಸಿನಿಮಾಗೆ ಹಲವು ಗೌರವಗಳು ಸಂದಿವೆ.