DAKSHINA KANNADA
ಕೊರೊನಾ ಲಾಕ್ ಡೌನ್ ಇದ್ದರೂ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ರಬ್ಬರ್ ತೋಟಗಳಲ್ಲಿ ಕಾರ್ಮಿಕರಿಗೆ ಕೆಲಸ

ಕೊರೊನಾ ಲಾಕ್ ಡೌನ್ ಇದ್ದರೂ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ರಬ್ಬರ್ ತೋಟಗಳಲ್ಲಿ ಕಾರ್ಮಿಕರಿಗೆ ಕೆಲಸ
ಪುತ್ತೂರು ಎಪ್ರಿಲ್ 10: ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ರಬ್ಬರ್ ತೋಟಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಕಡ್ಡಾಯವಾಗಿ ಕೆಲಸಕ್ಕೆ ಹಾಜರಾಗಬೇಕು ಎನ್ನುವ ಆದೇಶ ನೀಡಲಾಗಿದೆ ಎನ್ನುವ ಆರೋಪ ಕಾರ್ಮಿಕರಿಂದ ಕೇಳಿ ಬಂದಿದೆ.
ಪುತ್ತೂರು ತಾಲೂಕಿನ ಕೌಡಿಚಾರಿನ ಕಣಯಾರು ಮಲೆ ರಬ್ಬರ್ ತೋಟದ 50 ಕ್ಕೂ ಮಿಕ್ಕಿದ ಕಾರ್ಮಿಕರು ಕೆಲಸಕ್ಕೆ ಹಾಜರಾಗಬೇಕು ಇಲ್ಲದೇ ಹೋದಲ್ಲಿ ಒಂದು ತಿಂಗಳ ಸಂಬಳವನ್ನು ನೀಡಲಾಗುವುದಿಲ್ಲ, ಜೊತೆಗೆ ದಂಡವನ್ನೂ ವಿಧಿಸುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೆಲಸ ಮಾಡಬೇಕೆಂಬ ಸೂಚನೆಯನ್ನೂ ನೀಡಿದ್ದು.

ಆದರೆ ರಬ್ಬರ್ ಹಾಲು ಸಂಗ್ರಹ ಘಟಕದಲ್ಲಿ ಇದನ್ನು ಪಾಲಿಸಲು ಅಗುತ್ತಿಲ್ಲ. ಅಲ್ಲದೆ ಇಲಾಖೆಯಿಂದ ಮಾಸ್ಕ್ ಸೇರಿದಂತೆ ಇನ್ನಿತರ ವೈರಾಣು ನಿಯಂತ್ರಕಗಳನ್ನು ಪೂರೈಸಲಾಗಿಲ್ಲ. ಎಲ್ಲರಿಗೂ ಲಾಕ್ ಡೌನ್ ಕಾನೂನು ಅನ್ವಯಿಸುವಾಗ ತಮಗೆ ಮಾತ್ರ ಕೆಲಸ ನಿರ್ವಹಿಸಲು ಒತ್ತಡ ಹೇರಲಾಗುತ್ತಿದೆ ಎಂದು ಕಾರ್ಮಿಕರು ಆರೋಪಿಸಿದ್ದಾರೆ.