Connect with us

LATEST NEWS

3200 ಕೋಟಿ ರೂ. ಮದ್ಯಹಗರಣ: ಆಂಧ್ರದ ಉದ್ಯಮಿ ಮೈಸೂರಲ್ಲಿ ಸೆರೆ

ಅಮರಾವತಿ, ಮೇ 14: ಆಂಧ್ರಪ್ರದೇಶದ ಹಿಂದಿನ ಜಗನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ 3200 ಕೋಟಿ ರೂ. ಸಾರಾಯಿ ಹಗರಣದಲ್ಲಿ ಬಾಲಾಜಿ ಗೋವಿಂದಪ್ಪ ಎಂಬ ಆರೋಪಿಯನ್ನು ಮೈಸೂರಿನಲ್ಲಿ ಮಂಗಳವಾರ ಬಂಧಿಸಲಾಗಿದೆ.

ಆಂಧ್ರ ಪ್ರದೇಶದ ವಿಶೇಷ ಪೊಲೀಸ್ ತನಿಖಾ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಈ ಬಂಧನವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಭಾರತಿ ಸಿಮೆಂಟ್ ಕಂಪನಿ ಕಾರ್ಯಕಾರಿ ನಿರ್ದೇಶಕರಾಗಿರುವ ಗೋವಿಂದಪ್ಪರನ್ನು ಹೈದ್ರಾಬಾದ್ ನಿವಾಸದಲ್ಲಿ 3 ದಿನಗಳ ಹಿಂದೆ ಹುಡುಕಲಾಗಿತ್ತು. ಅದಾದ ಬಳಿಕ ಮಂಗಳವಾರ ಮೈಸೂರಿನಲ್ಲಿ ಬಂಧನವಾಗಿದೆ.

ಇತ್ತೀಚೆಗೆ ಜಾರಿ ನಿರ್ದೇಶನಾಲಯ ಗೋವಿಂದಪ್ಪ ವಿರುದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನೂ ದಾಖಲಿಸಿತ್ತು. 2024ರಲ್ಲಿ ಆರ್ಥಿಕ ಅಪರಾಧಗಳ ಸಿಐಡಿ ವಿಭಾಗ ಆಂಧ್ರದಲ್ಲಿ ಎಫ್‌ಐಆರ್ ದಾಖಲಿಸಿತ್ತು.ಅದಾದ ನಂತರ ಈ ಪ್ರಕರಣವನ್ನು ಇಡಿ ಕೈಗೆತ್ತಿಕೊಂಡು ತನಿಖೆ ಆರಂಭಿಸಿದೆ. ಇದೇ ಪ್ರಕರಣದಲ್ಲಿ ಮುಖ್ಯ ಆರೋಪಿಗಳಾಗಿರುವ ಕಾಸಿರೆಡ್ಡಿ ರಾಜಶೇಖರ ರೆಡ್ಡಿ ಸೇರಿದಂತೆ ಹಲವರನ್ನು ಎಸ್‌ಐಟಿ ಆರೋಪಪಟ್ಟಿಯಲ್ಲಿ ಹೆಸರಿಸಿತ್ತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *