ಪುತ್ತೂರು : ಯುನೈಟೆಡ್ ಎಂಪವರ್ಮೆಂಟ್ ಅಸೋಸಿಯೇಷನ್ ಇದರ ಅದೀನದಲ್ಲಿ ನಡೆದ ಕಮ್ಯುನಿಟಿ ಫೆಸ್ಟ್ 2026ಇದರ ಅಂಗವಾಗಿ ಎಕ್ಸ್ಪರ್ಟೈಸ್ ಯುನೈಟೆಡ್ ವಾಲಿಬಾಲ್ ಲೀಗ್ ಎಂಟು ತಂಡಗಳ ಲೀಗ್ ಮಾದರಿಯ ಎರಡು ದಿವಸದ ಚಾಂಪಿಯನ್ಶಿಪ್ ಉಳ್ಳಾಲದ ಸಿ ಗ್ರೌಂಡ್ ನಲ್ಲಿ ಬಹಳ ಅದ್ದೂರಿಯಲ್ಲಿ ಪ್ರೋ ಮಾದರಿಯ ವಾಲಿಬಾಲ್ ಪಂದ್ಯಾಟದ ನಡೆಯಿತು.

ಹುಸೇನ್ ಹಾಜಿ ಕೋಡಿಂಬಾಡಿ ಮಾಲಕತ್ವದ ಸಹ ಮಾಲಕರಾಗಿ ಸೋಹೈಲ್ ರವರ ರೋಯಲ್ ಪುತ್ತೂರುತಂಡ ಮಂಗಳೂರು ಸ್ಪೋರ್ಟ್ಸ್ ಕ್ಲಬ್ ಅಲ್ ಜುಬೈಲ್ ತಂಡವನ್ನು ಫೈನಲ್ ಪಂದ್ಯಾಟದಲ್ಲಿ ಅಧ್ಬುತವಾಗಿ ಭಾಗವಹಿಸಿದ ಎಲ್ಲಾ ಲೀಗ್ ಹಂತದ ಪಂದ್ಯವನ್ನು ಜಯಿಸಿ ಚಾಂಪಿಯನ್ ಆಫ್ ಚಾಂಪಿಯನ್ ಆಗಿವಿಜಯದ ಪತಾಕೆಯನ್ನು ಹಾರಿಸುವ ಮೂಲಕ ಪುತ್ತೂರಿನ ಹಿರಿಮೆ ಗರಿಮೆಯನ್ನು ಭಾನಂತರಕ್ಕೆ ಏರಿಸಿದರು.
ತಂಡದಲ್ಲಿ ಐಕಾನ್ ಆಟಗಾರರಾಗಿ ಜಮ್ಮು ಕಾಶ್ಮೀರದ ಮುಷರಫ್ ಮತ್ತು ಅಯಾಜ್ ತಂಡದ ಪ್ರಮುಖ ಆಟಗಾರರಾಗಿ ಸೈದ್ . ಅಬೂ ಆಶಿಮ್,ಆಸೀಲ್ ಉನಾಯಿಜ್,ಸಾಹಿಲ್, ನೌಫಲ್ ಪುಣಚ, ಶಫೀಕ್,ಮುಸ್ತಾಕ್,ಆಸಿಫ್, ಹನೀನ್ ಹಾಗೂ ಕೋಚ್ ಆಗಿ ಇರ್ಷಾದ್ ಕೌಡಿಚಾರ್, ಮ್ಯಾನೇಜರ್ ಆಗಿ ಮುಧಸಿರ್, ತಂಡದ ಅಲ್ ರೌಂಡರ್ ಆಗಿ ಜಮ್ಮು ಕಾಶ್ಮೀರದ ಮುಷ್ರಫ್, ಉತ್ತಮ (ಲಿಫ್ಟರ್) ಎತ್ತುಗಾರನಾಗಿ ಜಮ್ಮು ಕಾಶ್ಮೀರದ ಅಯಾಜ್, ಉತ್ತಮ ಹೊಡೆತ ಗಾರನಾಗಿ ಮಂಗಳೂರು ಸ್ಪೋರ್ಟ್ಸ್ ಕ್ಲಬ್ ಸೈದ್ ಆಲಂ ಉತ್ತರ ಪ್ರದೇಶ್, ಉತ್ತಮ ತಡೆಗಾರನಾಗಿ ಸೈಯದ್,ಉತ್ತಮ ಲಿಬ್ರಾ ರಾಗಿ ನೌಫಲ್ ಪುಣಚ, ವೈಯಕ್ತಿಕ ಪ್ರಶಸ್ತಿಯನ್ನು ಪಡೆದುಕೊಂಡರು ಎಂದು ವಿಜೇತ ತಂಡದ ಸಲಹೆಗಾರರಾದ ಸಿರಾಜ್ ಮತ್ತು ಸಾಲ್ಮರ ಶರೀಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸುತ್ತಾರೆ.