LATEST NEWS
ಕುಂದಾಪುರದಲ್ಲಿ ಹಾಡು ಹಗಲೇ ರೌಡಿಗಳ ಅಟ್ಟಹಾಸ

ಕುಂದಾಪುರದಲ್ಲಿ ಹಾಡು ಹಗಲೇ ರೌಡಿಗಳ ಅಟ್ಟಹಾಸ
ಉಡುಪಿ ಮೇ 31: ಕುಂದಾಪುರದಲ್ಲಿ ಹಾಡುಹಗಲೇ ರೌಡಿಗಳ ಅಟ್ಟಹಾಸ ಮೆರೆದ ಘಟನೆ ನಡೆದಿದೆ. ನಾಲ್ಕು ಜನ ಪುಡಿ ರೌಡಿಗಳು ಹಾಡು ಹಗಲೇ ಇಬ್ಬರು ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಕುಂದಾಪುರದ ನೇರಳಕಟ್ಟೆಯಲ್ಲಿ ಎಂಬಲ್ಲಿ ಈ ಘಟನೆ ನಡೆದಿದ್ದು, ಹಳೆಯ ದ್ವೇಷದ ಹಿನ್ನಲೆಯಲ್ಲಿ ಇಂದು ನಾಲ್ಕು ನಾಲ್ಕು ಜನ ಪುಡಿ ರೌಡಿಗಳು ಸಂತೋಷ್ ಪೂಜಾರಿ ಮತ್ತು ಅಕ್ಷತ್ ಶೆಟ್ಟಿ ಎಂಬ ಇಬ್ಬರು ಯುವಕರನ್ನು ಅಟ್ಟಾಡಿಸಿಕೊಂಡು ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದವರನ್ನು ಭಾಸ್ಕರ ಶೆಟ್ಟಿ, ಪ್ರಸಾದ್ ಶೆಟ್ಟಿ, ಕರುಣಾಕರ ಶೆಟ್ಟಿ ಎಂದು ಹೇಳಲಾಗಿದೆ.

ಬಡ್ಡಿ ವ್ಯವಹಾರದಿಂದ ಪ್ರಾರಂಭವಾದ ಗಲಾಟೆ ಹಲ್ಲೆಗೆ ಬಂದು ನಿಂತಿದ್ದು, ಅಕ್ಷತ್ ಶೆಟ್ಟಿ ಹಾಗೂ ಆರೋಪಿ ಪ್ರಸಾದ್ ಶೆಟ್ಟಿ ನಡುವೆ ಬಡ್ಡಿ ವ್ಯವಹಾರವಿತ್ತು. ಈ ಬಡ್ಡಿ ವ್ಯವಹಾರದ ಸಂಬಂಧ ಒಂದು ತಿಂಗಳ ಹಿಂದಷ್ಟೇ ಅಕ್ಷತ್ ಶೆಟ್ಟಿಯ ಜೊತೆ ಪ್ರಸಾದ್ ಶೆಟ್ಟಿ ಮಾರಮಾರಿ ಮಾಡಿಕೊಂಡ ಕೈ ಮುರಿದುಕೊಂಡಿದ್ದನು. ಈ ಹಿನ್ನಲೆಯಲ್ಲಿ ಹಳೆಯ ಗಲಾಟೆಗೆ ಸೇಡು ತಿರಿಸಿಕೊಳ್ಳಲು ಇಂದು ಹಾಡು ಹಗಲೇ ಈ ಘಟನೆ ನಡೆಸಿದ್ದಾನೆ ಎಂದು ಹೇಳಲಾಗಿದೆ. ಗೆಳೆಯನನ್ನು ರಕ್ಷಿಸಲು ಹೋದ ಸಂತೋಷ ತಲೆಗೆ ಬಾಟಲಿಯಿಂದ ಬಲವಾಗಿ ಹೊಡೆದು ರೌಡಿಗಳು ಪರಾರಿಯಾಗಿದ್ದಾರೆ.
ಸಂತೋಷ ಪೂಜಾರಿ ಮತ್ತು ಅಕ್ಷತ್ ಶೆಟ್ಟಿ ಕುಂದಾಪುರ ಸರಕಾರಿ ಆಸ್ಪತ್ರೆ ಗೆ ದಾಖಲಿಸಲಾಗಿದ್ದು, ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.