FILM
ಸಾನ್ಯ ಬೆಸ್ಟ್ ಫ್ರೆಂಡ್‌ಗಿಂತ ಮೇಲೆ ಎಂದ್ರು ರೂಪೇಶ್ ಶೆಟ್ಟಿ….!!
ಬೆಂಗಳೂರು ನವೆಂಬರ್ 13: ಕಲರ್ಸ್ ಕನ್ನಡದಲ್ಲಿ ನಡೆಯುತ್ತಿರುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ರೊಮ್ಯಾಂಟಿಕ್ ಕಪಲ್ಸ್ ಆಗಿ ಪೇಮಸ್ ಆಗಿದ್ದ ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಅಯ್ಯರ್ ಮತ್ತೆ ಇದೀಗ ಸುದ್ದಿಯಲ್ಲಿದ್ದು, ಸಾನ್ಯಾ ಅಯ್ಯರ್ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲೂ ಮನೆಯಲ್ಲಿ ಸಾನ್ಯಾ ಅಯ್ಯರ್ ಟಾಕ್ ಆಗಿದ್ದಾರೆ.
ಇದೀಗ ಸಂಬರ್ಗಿ ರೂಪೇಶ್ ಶೆಟ್ಟಿಗೆ ನೇರವಾಗಿ ಪ್ರಶ್ನೆಯೊಂದನ್ನ ಕೇಳಿದ್ದಾರೆ. ನಿಮ್ಮ ಕುಟುಂಬದವರು, ನೀವಿಬ್ಬರು ಒಳ್ಳೆಯ ಜೋಡಿ ಎಂದ್ಹೇಳಿ, ನೀವು ಸಾನ್ಯನ ಮುಂದಿನ 3 ವರ್ಷಗಳಲ್ಲಿ ಮದುವೆಯಾಗುವ ಸಾಧ್ಯತೆ ಇದ್ಯಾ ಎಂದು ರೂಪೇಶ್‌ಗೆ ನೇರವಾಗಿ ಸಂಬರ್ಗಿ ಕೇಳಿದಾಗ, ಅಷ್ಟೇಲ್ಲಾ ಯಾರು ಥಿಂಕ್ ಮಾಡುತ್ತಾರೆ ಈಗೆಲ್ಲಾ ನಾನು ಯೋಚನೆ ಮಾಡಿಲ್ಲ ಎಂದು ರೂಪೇಶ್ ಹೇಳುತ್ತಾರೆ.
ಆಗ ರಾಜಣ್ಣ ಕೂಡ ನೇರವಾಗಿ ಹೇಳಿ ಎಂದು ಶೆಟ್ರಿಗೆ ಕೇಳುತ್ತಾರೆ. ಸಾನ್ಯ ನಿಮ್ಮನ್ನ ಜೀವನ ಸಂಗಾತಿಯಾಗಿ ಕಾಣುವ ದೃಷ್ಟಿಕೋನ ಇದ್ಯಾ ಎಂದಿದ್ದಾರೆ. ಈ ಬಗ್ಗೆ ನಾನು ಯೋಚನೆ ಮಾಡಿಲ್ಲ ಆದರೆ, ಪ್ರಪೋಸಲ್ ಬಂದ್ರೆ ನೋ ಅಂತಾ ಹೇಳಲ್ಲ. ಸಾನ್ಯ ಬೆಸ್ಟ್ ಫ್ರೆಂಡ್‌ಗಿಂತ ಮೇಲೆನೇ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ.
ಇನ್ನೂ ಸಾನ್ಯ ಅಯ್ಯರ್ ವೈರ್ಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಬಿಗ್ ಬಾಸ್ ಮನೆಗೆ ಮತ್ತೆ ಬರಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಒಂದು ವೇಳೆ ಬಂದಲ್ಲಿ ಸಾಕಷ್ಟು ರೋಚಕ ತಿರುವುಗಳನ್ನು ಪಡೆಯುತ್ತಿದೆ.