LATEST NEWS
ಸ್ವಿಮ್ಮಿಂಗ್ ಪೂಲ್ ನಲ್ಲಿ ರೊಮ್ಯಾನ್ಸ್ ನಲ್ಲಿರುವಾಗಲೇ ಭೂಕಂಪ

ಬ್ಯಾಂಕಾಕ್ ಮಾರ್ಚ್ 30: ಮಯನ್ಮಾರ್ ಮತ್ತು ಥೈಲ್ಯಾಂಡ್ ನಲ್ಲಿ ಭೂಕಂಪದಿಂದಾಗಿ ನೂರಾರು ಕಟ್ಟಡಗಳು ನೆಲಸಮವಾಗಿವೆ. ವಿಶ್ವವಿಖ್ಯಾತ ಪ್ರವಾಸಿ ತಾಣವಾದ ಬ್ಯಾಂಕಾಕ್ ನಲ್ಲಿರುವ ಗಗನಚುಂಬಿ ಕಟ್ಟಡದಿಂದ ಸ್ವಿಮ್ಮಿಂಗ್ ಪೂಲ್ ನಿಂದ ನೀರು ರಸ್ತೆಗೆ ಬೀಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಬ್ಯಾಂಕಾಕ್ ನ ಹೊಟೇಲ್ ಒಂದರಲ್ಲಿ ಹನಿಮೂನ್ ಗೆ ತೆರಳಿದ್ದ ಜೋಡಿ ಸ್ವಿಮ್ಮಿಂಗ್ ಪೂಲ್ ನಲ್ಲಿ ರೊಮಾನ್ಸ್ ಮಾಡುವ ವೇಳೆ ಭೂಕಂಪ ಸಂಭವಿಸಿದ ವಿಡಿಯೋ ವೈರಲ್ ಆಗಿದೆ.
ಭೂಕಂಪನದ ವೇಳೆ ಬ್ಯಾಂಕಾಕ್‌ನ ಹೋಟೆಲ್‌ನ ಮೇಲ್ಛಾವಣಿಯ ಸ್ವಿಮಿಂಗ್ ಪೂಲ್ನಲ್ಲಿ ನೀರು ಕೆಳಗೆ ಧುಮ್ಮಿಕ್ಕುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಇದೇ ಇದೇ ಸ್ವಿಮ್ಮಿಂಗ್ ಪೂಲ್ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ. ಅತ್ಯಂತ ಶಾಂತವಾಗಿದ್ದ ಸ್ವಿಮ್ಮಿಂಗ್ ಪೂಲ್ ನಲ್ಲಿನ ನೀರು ಭೂಕಂಪನದ ವೇಳೆ ಸಮುದ್ರದ ಅಲೆಗಳಂತೆ ಮಾರ್ಪಟ್ಟಿತು. ಈ ವೇಳೆ ನೀರು ಕೆಳಗೆ ಧುಮ್ಮಿಕ್ಕಿತು. ಈ ಕುರಿತ ವಿಡಿಯೋಗಳು ವ್ಯಾಪಕ ವೈರಲ್ ಆಗಿತ್ತು.

ಇನ್ನು ಇದೇ ಸ್ವಿಮ್ಮಿಂಗ್ ಪೂಲ್ ನಲ್ಲಿ ಜೋಡಿಯೊಂದು ಲೌಂಜರ್‌ಗಳ ಮೇಲೆ ತೇಲುತ್ತಿತ್ತು. ಆದರೆ ಈ ವೇಳೆ ಭೂಕಂಪ ಸಂಭವಿಸುತ್ತಿದ್ದಂತೆ, ನೀರು ಏರಿಳಿತಗೊಳ್ಳಲು ಪ್ರಾರಂಭಿಸಿತು. ಕೆಲವೇ ಸೆಕೆಂಡುಗಳಲ್ಲಿ, ಬೃಹತ್ ಅಲೆಗಳು ರೂಪುಗೊಂಡವು, ಕೊಳದ ಅಂಚುಗಳ ಮೇಲೆ ಅಪ್ಪಳಿಸಿದವು. ಅಷ್ಟು ಹೊತ್ತು ರೊಮ್ಯಾನ್ಸ್ ನಲ್ಲಿ ಬಿಸಿಯಾಗಿದ್ದ ಈ ಜೋಡಿ ಏಕಾಏಕಿ ಪ್ರಾಣ ಉಳಿಸಿಕೊಳ್ಳಲು ಪರದಾಡಿತು. ನಿಶ್ಚಿಂತೆಯಿಂದ ಸ್ವಿಮ್ಮಿಂಗ್ ಪೂಲ್ ನಲ್ಲಿ ಮಲಗಿದ್ದ ಜೋಡಿ ಭೂಕಂಪದಿಂದ ತತ್ತರಿಸಿ ಹೋಯಿತು. ಶಾಂತವಾಗಿದ್ದ ಈಜುಕೊಳವು ವಿಪತ್ತಾಗಿ ಮಾರ್ಪಟ್ಟ ಭಯಾನಕ ಕ್ಷಣವನ್ನು ಸೆರೆಹಿಡಿದಿರುವ ವೀಡಿಯೊ ಈಗ ವೈರಲ್ ಆಗಿದೆ.