Connect with us

    FILM

    KGF-3 ರಹಸ್ಯ ಬಿಚ್ಚಿಟ್ಟ ರಾಕಿಂಗ್ ಸ್ಟಾರ್ ಯಶ್

    ಬೆಂಗಳೂರು, ನವೆಂಬರ್ 06: ಕೆಜಿಎಫ್ 2 ಸೂಪರ್ ಸಕ್ಸಸ್ ನಂತರ ಯಶ್ ಮುಂದಿನ ನಡೆ ಮೇಲೆ ಎಲ್ಲರಿಗೂ ಕಣ್ಣಿದೆ. ಯಶ್ ಮುಂದಿನ ಪ್ರಾಜೆಕ್ಟ್ ಅಪ್‌ಡೇಟ್‌ಗಳಿಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ. ಇತ್ತೀಚೆಗೆ ಹಾಲಿವುಡ್ ನಿರ್ದೇಶಕರನ್ನ ಭೇಟಿ ಮಾಡಿದ್ದ ಯಶ್ ಇದೀಗ `ಕೆಜಿಎಫ್ 3′ ಚಿತ್ರದ ಕುರಿತು ಒಂದಿಷ್ಟು ರಹಸ್ಯಗಳನ್ನ ಬಿಚ್ಚಿಟ್ಟಿದ್ದಾರೆ.

    ಈ ಕುರಿತು ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಯಶ್, ಸದ್ಯ ಸ್ವಲ್ಪ ವಿರಾಮ ತೆಗೆದುಕೊಳ್ಳಲು ಬಯಸಿದ್ದೇನೆ. ಮುಂದಿನ ಸಿನಿಮಾದ ತಯಾರಿ ನಡೆಯುತ್ತಿದೆ. ಫಿಟ್‌ನೆಸ್, ಸ್ಕ್ರಿಪ್ಟ್‌ ಮಾತುಕತೆ ಈ ರೀತಿ ದೈನಂದಿನ ಕಾರ್ಯಕ್ರಮಗಳು ನಡೆಯುತ್ತಿವೆ. ಆದ್ರೆ ಕೆಜಿಎಫ್-3 ಸದ್ಯಕ್ಕಂತೂ ಇಲ್ಲ ಎಂದು ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದಾರೆ.

    ಕೆಜಿಎಫ್ ಸಿನಿಮಾಗಾಗಿ 5-6 ವರ್ಷ ಶ್ರಮ ಹಾಕಿದ್ದೇವೆ. ಅದರಂತೆ ಯಶಸ್ಸು ಕಂಡಿದ್ದೇವೆ. ಕೋವಿಡ್ ಪ್ಯಾಂಡಮಿಕ್‌ನಿಂದಾಗಿ ಟೈಂ ಎಷ್ಟು ಮುಖ್ಯ ಅನ್ನೋದು ನನಗೆ ಗೊತ್ತಾಗಿದೆ. ಹಾಗಾಗಿ ಕೆಜಿಎಫ್-2 ಸಿನಿಮಾ ನಂತರ ನನ್ನ ಫ್ಯಾಮಿಲಿಗೂ ಟೈಂ ಕೊಡುತ್ತಿದ್ದೇನೆ. ಇದೆಲ್ಲದರ ನಡುವೆ ಹೊಸ ಸಿನಿಮಾಗಳ ಬಗ್ಗೆ ಮಾತುಕತೆ ನಡೀತಿದೆ. ಸದ್ಯ ನಾನು ಹೊಸತೇನಾದರೂ ಮಾಡಬೇಕು ಅಂದುಕೊಂಡಿದ್ದೇನೆ. ಹಾಗಾಗಿ ಕೆಜಿಎಫ್-3 ಸಿನಿಮಾ ಸದ್ಯಕ್ಕೆ ಇಲ್ಲ ಎಂದು ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply