Connect with us

LATEST NEWS

ಗಾಜಾಪಟ್ಟಿ ಆಸ್ಪತ್ರೆ ಮೇಲೆ ಬಿದ್ದ ರಾಕೆಟ್ – 500ಕ್ಕೂ ಅಧಿಕ ಮಂದಿ ಸಾವು…!!

ಗಾಜಾ ಪಟ್ಟಿ ಅಕ್ಟೋಬರ್ 18 : ಇಸ್ರೇಲ್ ಮತ್ತು ಗಾಜಾ ನಡುವಿನ ಕದನದಲ್ಲಿ ಇದೀಗ ಜನ ಸಾಮಾನ್ಯರು ಸಾವಿನ ಬಾಗಿಲು ಬಡಿಯುವಂತಾಗಿದೆ. ಇದೀಗ ಗಾಜಾ ನಗರದಲ್ಲಿ ಆಸ್ಪತ್ರೆಯ ಮೇಲೆ ರಾಕೆಟ್ ಒಂದು ಬಿದ್ದ ಪರಿಣಾಮ 500ಕ್ಕೂ ಅಧಿಕ ಮಂದಿ ಸಾವನಪ್ಪಿದ್ದಾರೆ. ಆದರೆ ಇದು ಗಾಜಾದಲ್ಲಿರುವ ಹಮಾಸ್ ಉಗ್ರರು ಹಾರಿಸಿದ ರಾಕೆಟ್ ಆಗಿದೆ ಎಂದು ಇಸ್ರೇಲ್ ಆರೋಪಿಸಿದೆ.


ಆದರೆ ಗಾಜಾದ ಅಧಿಕಾರಿಗಳ ಪ್ರಕಾರ ಇಸ್ರೇಲ್ ಗಾಜಾದ ಅಹ್ಲಿ ಅರಬ್‌ ಆಸ್ಪತ್ರೆ ಮೇಲೆ ದಾಳಿ ನಡೆಸಿದ್ದು, 500ಕ್ಕೂ ಅಧಿಕ ಮಂದಿ ಸಾವನಪ್ಪಿದ್ದಾರೆ ಎಂದಿದೆ. ಗಾಜಾದ ಹಮಾಸ್‌ ಸರ್ಕಾರ ಈ ದಾಳಿಯನ್ನು ‘ಯುದ್ಧ ಅಪರಾಧ’ ಎಂದು ಹೇಳಿದೆ. ‘ಕಟ್ಟಡದ ಅವಶೇಷಗಳ ನಡುವೆ ನೂರಾರು ಜನರು ಸಿಕ್ಕಿಬಿದ್ದಿದ್ದಾರೆ, ಸಾವಿನ ಸಂಖ್ಯೆ ಹೆಚ್ಚಬಹುದು’ ಎಂದು ಸಚಿವಾಲಯವು ತಿಳಿಸಿದೆ. ದಾಳಿ ಹಿಂದೆಯೇ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಿಟಕಿಗಳ ಗಾಜುಗಳು ಸಿಡಿದವು. ವಾಯು ದಾಳಿಗೆ ಸಿಕ್ಕವರ ದೇಹದ ತುಣುಕುಗಳು ವಿವಿಧೆಡೆ ಚೆಲ್ಲಾಡಿದ್ದವು ಎಂದು ವರದಿ ತಿಳಿಸಿದೆ.


ಆಸ್ಪತ್ರೆಯಲ್ಲಿದ್ದ ರೋಗಿಗಳು, ಗಾಯಾಳುಗಳನ್ನು ದಾಳಿ ಹಿನ್ನೆಲೆಯಲ್ಲಿ ಬಲವಂತವಾಗಿ ಬೇರೆಡೆಗೆ ಸ್ಥಳಾಂತರಿಸಲಾಯಿತು.ನಗರದ ಇತರೆ ಆಸ್ಪತ್ರೆಗಳಲ್ಲಿಯೂ ಹಲವು ನಿರಾಶ್ರಿತರು ಆಶ್ರಯ ಪಡೆದಿದ್ದಾರೆ ಎಂದು ಸಚಿವಾಲಯವು ತಿಳಿಸಿದೆ. ಆದರೆ ಇಸ್ರೇಲ್ ಈ ವಾದವನ್ನು ತಳ್ಳಿ ಹಾಕಿದ್ದು, ಅದಕ್ಕೆ ಸಾಕ್ಷಿಯಾಗಿ ವಿಡಿಯೋ ಒಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಹಮಾಸ್ ಉಗ್ರರು ಹಾರಿಸಿದ ರಾಕೆಟ್ ಒಂದು ತಾಂತ್ರಿಕ ದೋಷದಿಂದ ಮತ್ತೆ ವಾಪಾಸ್ ಗಾಜಾದ ಆಸ್ಪತ್ರೆಯ ಮೇಲೆ ಬಿದ್ದಿದೆ ಎಂದು ತಿಲಿಸಿದೆ.
ಅಕ್ಟೋಬರ್ 7ರಂದು ಇಸ್ರೇಲ್‌ ಮತ್ತು ಹಮಾಸ್‌ ಬಂಡುಕೋರರ ನಡುವೆ ಸಂಘರ್ಷವು ಆರಂಭವಾದ ನಂತರ ಈವರೆಗೆ ಗಾಜಾಪಟ್ಟಿಯಲ್ಲಿ ಸುಮಾರು 3,000 ಜನರು ಹಾಗೂ ಇಸ್ರೇಲ್‌ನಲ್ಲಿ ಸುಮಾರು 1,400 ಜನರು ಸತ್ತಿದ್ದಾರೆ.

ಗಾಜಾದ ಆಸ್ಪತ್ರೆಯೊಂದರ ಮೇಲೆ ನಡೆದ ದಾಳಿಗೆ ನೂರಾರು ಜನರು ಬಲಿಯಾದ ಕೃತ್ಯದಿಂದಾಗಿ ಪ್ಯಾಲೆಸ್ಟೀನ್ ಅಧ್ಯಕ್ಷ ಮಹಮ್ಮದ್ ಅಬ್ಬಾಸ್‌ ಅವರು ಮೂರು ದಿನ ಶೋಕ ಘೋಷಿಸಿದ್ದಾರೆ. ಇದು, ಹತ್ಯಾಕಾಂಡವಲ್ಲದೇ ಬೇರೇನೂ ಅಲ್ಲ. ಇಂತ ನರಮೇಧವನ್ನು ತಡೆಯಲು ಅಂತರರಾಷ್ಟ್ರೀಯ ಸಮುದಾಯ ತಕ್ಷಣಕ್ಕೆ ಮಧ್ಯಪ್ರವೇಶಿಸಬೇಕು ಎಂದು ನಾವು ಕೋರುತ್ತೇವೆ. ದೀರ್ಘಕಾಲ ಮೌನವನ್ನು ಸಹಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *