LATEST NEWS
ಕರೋನಾ ಭೀತಿ ಮಂಗಳೂರಿನಲ್ಲಿ ಫಾಸ್ಟ್ ಫುಡ್, ಬೀದಿಬದಿ ವ್ಯಾಪಾರ ಬಂದ್
ಕರೋನಾ ಭೀತಿ ಮಂಗಳೂರಿನಲ್ಲಿ ಫಾಸ್ಟ್ ಫುಡ್, ಬೀದಿಬದಿ ವ್ಯಾಪಾರ ಬಂದ್
ಮಂಗಳೂರು ಮಾ.16: ಮಂಗಳೂರಿನಲ್ಲಿ ಕರೋನಾ ಭೀತಿಗೆ ಜಿಲ್ಲಾಡಳಿತ ರಸ್ತೆ ಬದಿ ವ್ಯಾಪಾರವನ್ನು ಬಂದ್ ಮಾಡಲು ಆದೇಶಿಸಿದೆ.ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೊರೊನಾ ಭೀತಿ ಜೊತೆಗೆ ಕಾಲರಾ ರೋಗವೂ ಹರಡುವ ಭೀತಿ ಇರುವ ಹಿನ್ನೆಲೆಯಲ್ಲಿ ಹಾಗೂ ನಗರದಲ್ಲೆಡೆ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ಮಾಡದಂತೆ ಪಾಲಿಕೆ ಆಯುಕ್ತ ಶಾನಾಡಿ ಅಜಿತ್ಕುಮಾರ್ ಇಂದು ಸುತ್ತೋಲೆ ಹೊರಡಿಸಿದ್ದಾರೆ.
ಇಂದಿನಿಂದ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಲಿದ್ದಾರೆ. ಕಾರ್ಯಾಚರಣಗೆ ಯಾರಾದರೂ ಅಡ್ಡಿ ಪಡಿಸಿದಲ್ಲಿ ಪೊಲೀಸ್ ಬಂದೋಬಸ್ತ್ ನಲ್ಲಿ ಕಾರ್ಯಾಚರಣೆ ಮಾಡಲಾಗುವುದು ಎಂದು ಆಯುಕ್ತರು ಎಚ್ಚರಿಸಿದ್ದಾರೆ. ಒಂದು ವೇಳೆ ಕಾರ್ಯಾಚರಣೆಗೆ ಅಡ್ಡಿ ಪಡಿಸಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.